Top

ಶ್ರುತಿ ಹರಿಹರನ್‌ಗೆ ಬೆಂಬಲಿಸಿ ಟ್ವೀಟ್ ಮಾಡಿದ ಶ್ರದ್ಧಾ

ಶ್ರುತಿ ಹರಿಹರನ್‌ಗೆ ಬೆಂಬಲಿಸಿ ಟ್ವೀಟ್ ಮಾಡಿದ ಶ್ರದ್ಧಾ
X

ನಟ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆ, ನಟಿ ಶ್ರದ್ಧಾ ಶ್ರೀನಾಥ್ ಶ್ರುತಿ ಬೆಂಬಲಕ್ಕೆ ನಿಂತಿದ್ದಾರೆ.

ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಶ್ರದ್ಧಾ ಶ್ರೀನಾಥ್ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಟಾರ್ ನಟರ ಮೇಲೆ ಆರೋಪ ಕೇಳಿ ಬಂದಾಗ ಯಾರು ಒಪ್ಪೋಕೆ ರೆಡಿ ಇರಲ್ಲ. ಎಲ್ಲದಕ್ಕೂ ಆಧಾರ ಕೇಳುತ್ತೀರಾ, ಎಲ್ಲದಕ್ಕೂ ಆಧಾರ ಇರಲ್ಲ ಎಂದಿದ್ದಾರೆ.

ಅಲ್ಲದೇ ತಮಗಾದ ಕಹಿ ಅನುಭವದ ಬಗ್ಗೆ ಹೇಳಿಕೊಂಡ ಶ್ರದ್ಧಾ, ಒಮ್ಮೆ ನಾನು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಸಹ ಪ್ರಯಾಣಿಕ ನನ್ನೊಡನೆ ಕೆಟ್ಟದಾಗಿ ನಡೆದುಕೊಂಡ. ಆಧಾರಕ್ಕಾಗಿ ಆತನ‌ ಜೊತೆ ನಾನು ಸೆಲ್ಫಿ ತೆಗೆದುಕೊಳ್ಳಬೇಕಿತ್ತೇ..? ಸಿನಿಮಾಗಳಲ್ಲಿ ತಂಗಿ, ತಾಯಿಗಾಗಿ ಕಿಡಿಗೇಡಿಗಳ‌ನ್ನ ಹೊಡೆದುರುಳಿಸುವ ಸೂಪರ್ ಹೀರೋಗಳು ಈಗ ಎಲ್ಲಿದ್ದೀರಾ..? ಎಂದು ಪ್ರಶ್ನಿಸುವ ಮೂಲಕ ಮೀಟೂ ಅಭಿಯಾನದ ಕುರಿತು ನಿಮ್ಮ ಪ್ರತಿಕ್ರಿಯೆ ಏನು ಅನ್ನೋ ಕುತೂಹಲ ನನ್ನದು ಎಂದು ನಟಿ ಶ್ರದ್ಧಾ ಟ್ವೀಟ್ ಮಾಡಿದ್ದಾರೆ.

Next Story

RELATED STORIES