Top

ಮೇಕೆ, ಕೋಣ ಕಡಿದ ಅಭಿಮಾನಿಗಳಿಗೆ ಸುದೀಪ್ ತರಾಟೆ..!

ಮೇಕೆ, ಕೋಣ ಕಡಿದ ಅಭಿಮಾನಿಗಳಿಗೆ ಸುದೀಪ್ ತರಾಟೆ..!
X

ದಿ ವಿಲನ್ ಸಿನಿಮಾ ಯಶಸ್ಸು ಕಾಣಲಿ ಎಂದು ಪ್ರೇಮ್ ಅಭಿಮಾನಿಗಳು ಮೇಕೆ, ಕೋಣ ಕಡಿದಿದ್ದಕ್ಕೆ ನಟ ಸುದೀಪ್ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ವಿಲನ್ ಚಿತ್ರದಲ್ಲಿ ಸೆಂಚೂರಿ ಸ್ಟಾರ್ ಶಿವರಾಜ್‌ಕುಮಾರ್‌ಗೆ ಕಿಚ್ಚ ಸುದೀಪ್ ಹೊಡೆದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ಶಿವಣ್ಣನ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ರು. ಅಲ್ಲದೇ ಸಿನಿಮಾದಲ್ಲಿ ಶಿವಣ್ಣನಿಗೆ ಹೆಚ್ಚಿನ ಮಹತ್ವ ನೀಡಿಲ್ಲವೆಂದು ಆರೋಪಿಸಿದ್ರು.

ಈ ಕಾರಣದಿಂದ ದಿ ವಿಲನ್ ಸಿನಿಮಾ ನೋಡುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಯಿತು ಎಂಬ ಕಾರಣಕ್ಕೆ ಪ್ರೇಮ್ ಅಭಿಮಾನಿಗಳು ಮೂಕ ಪ್ರಾಣಿಗಳನ್ನು ಬಲಿ ಕೊಟ್ಟು ದಿ ವಿಲನ್ ಸಿನಿಮಾ ಯಶಸ್ಸು ಕಾಣಲಿ ಎಂದು ಹರಕೆ ಹೊತ್ತರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಿಚ್ಚ ಸುದೀಪ್ ಕ್ರೂರತನ ಅಮಾನವೀಯವಾದದ್ದು, ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿಬಿಡಿ, ಈ ರೀತಿ ಆದಂತಹ ಪ್ರೀತಿ ಗೌರವ ವಿಲನ್ ತಂಡ ನಿರೀಕ್ಷಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಅಭಿಮಾನಿಗಳು ಥಿಯೇಟರ್‌ ಬಳಿ ಕೋಣ ಕಡಿದು ಅಮಾನವೀಯವಾಗಿ ವರ್ತಿಸಿದ್ದರು. ಅಲ್ಲದೇ ಕುರಿ ಕಡಿದು ಅದರ ರಕ್ತದಲ್ಲಿ ಸುದೀಪ್‌ ಕಟೌಟ್‌ಗೆ ರಕ್ತಾಭೀಷೇಕ ಮಾಡಿದ್ದರು.

Next Story

RELATED STORIES