Top

ಗದಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಶ್ರೀಗಳು ಲಿಂಗೈಕ್ಯ

ಗದಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಶ್ರೀಗಳು ಲಿಂಗೈಕ್ಯ
X

ಗದಗ: ಗದಗನ ತೋಂಟದಾರ್ಯ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಶುಕ್ರವಾರ ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ.

ಹೃದಯಾಘಾತದಿಂದ ಗದಗಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಲಿಂಗ ಸ್ವಾಮೀಜಿಗೆ ಶುಕ್ರವಾರ ಬೆಳಗ್ಗೆ ಮತ್ತೊಮ್ಮೆ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಗದಗಿನ ತೋಟಂದಾರ್ಯ ಸ್ವಾಮೀಜಿ ಅಗಲಿಕೆ ಭಕ್ತರಿಗೆ ಆಘಾತ ನೀಡಿದ್ದು, ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಭಾನುವಾರ ಸಂಜೆ ನಾಲ್ಕು ಗಂಟೆಗೆ ಮಠದಲ್ಲೇ ಶ್ರೀಗಳ ಅಂತ್ಯಸಂಸ್ಕಾರ ನಡೆಯಲಿದೆ.

ತೋಂಟದಾರ್ಯ ಸ್ವಾಮೀಜಿ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದು, ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಇಂದು ಅತ್ಯಂತ ನೋವಿನ ದಿನ. ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಧೈರ್ಯದಿಂದ ಸತ್ಯವನ್ನ ಹೇಳುತ್ತಿದ್ದರು ಎಂದು ಸಿಎಂ ಹೇಳಿದ್ದಾರೆ.

ಸ್ವಾಮೀಜಿ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೂಡ ಸಂತಾಪ ವ್ಯಕ್ತಪಡಿಸಿದ್ದು, ತೋಂಟದಾರ್ಯ ಸ್ವಾಮೀಜಿ ಅಗಲಿಕೆ ನೋವು ತಂದಿದೆ. ಅವರು ಅನ್ನದಾನದ ಜೊತೆಗೆ ಶಿಕ್ಷಣ ನೀಡುತ್ತಿದ್ದರು. ರಾಜ್ಯದ ಜನರಿಗೆ ಈ ಸುದ್ದಿ ಸಾಕಷ್ಟು ಆತಂಕ ಸೃಷ್ಟಿಸಿದೆ. ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದಿದ್ದಾರೆ.

ಸ್ವಾಮೀಜಿ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ಅವರು ಪ್ರಗತಿಪರವಾದ ನಿಲುವನ್ನ ಹೊಂದಿದ್ದವರು. ಅಪಾರ ಜ್ಞಾನವಂತರು. ಬಹಳ ಪುಸ್ತಕಗಳನ್ನೂ ಬರೆದಿದ್ದರು. ವೈಚಾರಿಕತೆಯನ್ನ ಬೆಳೆಸಿಕೊಂಡಿದ್ದರು. ಅವರ ಅಕಾಲಿಕ ನಿಧನ ರಾಜ್ಯದ ಜನರಿಗೆ ದಿಘ್ಬ್ರಮೆ ತಂದಿದೆ. ಧರ್ಮಕ್ಷೇತ್ರಕ್ಕೂ ತುಂಬಲಾರದ ನಷ್ಟ ತಂದಿದೆ ಎಂದಿದ್ದಾರೆ.

Next Story

RELATED STORIES