Top

ಜಿ.ಟಿ.ದೇವೇಗೌಡ ಎಡವಿದ್ದಕ್ಕೆ ತನ್ವೀರ್ ವ್ಯಂಗ್ಯ

ಜಿ.ಟಿ.ದೇವೇಗೌಡ ಎಡವಿದ್ದಕ್ಕೆ ತನ್ವೀರ್ ವ್ಯಂಗ್ಯ
X

ಮೈಸೂರು: ಮೈಸೂರು ದಸರಾ ಆಚರಣೆ ಬಗ್ಗೆ ದೋಸ್ತಿಗಳ ಭಿನ್ನಮತ ಸ್ಫೋಟಗೊಂಡಿದ್ದು, ಕಾಂಗ್ರೆಸ್ ನಾಯಕರು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಚಿವ ತನ್ವೀರ್ ಸೇಠ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರು, ಮಾಜಿ ಜಿಲ್ಲಾಧ್ಯಕ್ಷ ಮತ್ತು ನರಗಾಧ್ಯಕ್ಷರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ತನ್ವೀರ್ ಸೇಠ್, ದಸರಾ ಆಚರಣೆಯಲ್ಲಿ ನಿಯಮ ಗಾಳಿಗೆ ತೂರಲಾಗಿದೆ. ಈ ಬಗ್ಗೆ ತನಿಖೆಗೆ ಆಗ್ರಹಿಸುತ್ತೇವೆ ಎಂದಿದ್ದಾರೆ.

ಪಾಸ್‌ಗಳ ವಿಚಾರದಲ್ಲಿ ಎಲ್ಲ ನಿಯಮ ಗಾಳಿಗೆ ತೂರಿದ್ದಾರೆ. ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷಕ್ಕೆ 8 ಪಾಸ್ ಕೊಟ್ಟಿದ್ದಾರೆ. ಹಾಲಿ ಶಾಸಕರಿಗೆ 100 ಪಾಸ್ ನೀಡಿದ್ದಾರೆ. ಅದೂ ಸಹ ಜನರು ಕೂರುವ ಜಾಗದಲ್ಲಿ ನಮಗೆ ಪಾಸ್ ನೀಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಉಸ್ತುವಾರಿ ಸಚಿವರು 10 ಸಾವಿರ ಪಾಸ್ ತೆಗೆದುಕೊಂಡಿದ್ದಾರೆ. ಸಾ.ರಾ.ಮಹೇಶ್ 5 ಸಾವಿರ ಪಾಸ್ ತೆಗೆದುಕೊಂಡಿದ್ದಾರೆ. ಉಪಸಮಿತಿಗಳು ನೇಮಕವಾಗಲಿಲ್ಲ ಆದ್ರೆ ಅಲ್ಲಿಗೆ ನೀಡಬೇಕಿದ್ದ 3000 ಪಾಸ್ ಎಲ್ಲಿ ಹೋದವು ಅಂತಾನೆ‌ ಗೊತ್ತಿಲ್ಲ. ಈ ಬಾರಿಯ ದಸರಾದಲ್ಲಿ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ದಸರಾ ಸಂಸ್ಕೃತಿ ಹಾಳು ಮಾಡಿದ್ದು ಈ ದಸರಾದಲ್ಲಿ ಕಾಣುತ್ತಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ಸಚಿವ ಜಿ.ಡಿ.ದೇವೇಗೌಡರು ಓಡುವ ವೇಳೆ ಎಡವಿ ಬಿದ್ದದ್ದನ್ನ ವ್ಯಂಗ್ಯವಾಡಿದ ತನ್ವೀರ್, ಅವರೇ ಓಡಿದ್ರು ಅವರೇ ಬಿದ್ರು, ಅವರೇ ದಸರಾ ಮಾಡಿದ್ರು ಎಂದು ನಗುತ್ತ ವ್ಯಂಗ್ಯವಾಡಿದ್ದಾರೆ.

ಇನ್ನು ಜೆಡಿಎಸ್ ಸಚಿವರಿಗೆ ಟಾಂಗ್ ನೀಡಿದ ತನ್ವೀರ್ ಸೇಠ್, ಸರ್ಕಾರದ ಸಚಿವ ಸಂಪುಟದವರನ್ನ ಕರೆದುಕೊಂಡು‌ ಬಂದು ಮೆರೆಸಿದರೆ ಆಗೋಲ್ಲ. ಸ್ಥಳೀಯವಾಗಿ ಯಾವ ಧರ್ಮವಾಗಿ ನಡೆದುಕೊಳ್ಳಬೇಕಿತ್ತು ಹಾಗೇ ನಡೆದುಕೊಂಡಿಲ್ಲ. ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಅವಮಾನ ಮಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಆದ ಅವಮಾನ. ನಾವು ಸಮ್ಮಿಶ್ರ ಸರ್ಕಾರದಲ್ಲಿದ್ದೇವೆ. ಆದ್ರೆ ದಬ್ಬಾಳಿಕೆ ಮಾಡುವ ಜೆಡಿಎಸ್ ಜೊತೆಗೆ ಇಲ್ಲ. ಇದು ನೇರವಾಗಿ ಕಾಂಗ್ರೆಸ್ ಜೆಡಿಎಸ್ ನಡುವಿನ ಹೋರಾಟ ಎಂದು ಹೇಳಿದ್ದಾರೆ.

Next Story

RELATED STORIES