Top

ಶೃತಿ ಹರಿಹರನ್‌ಗೆ ಕಿರುಕುಳ ನೀಡಿದ್ರಾ ಅರ್ಜುನ್ ಸರ್ಜಾ..?

ಶೃತಿ ಹರಿಹರನ್‌ಗೆ ಕಿರುಕುಳ ನೀಡಿದ್ರಾ ಅರ್ಜುನ್ ಸರ್ಜಾ..?
X

#Metoo ಅಭಿಯಾನ ಸ್ಯಾಂಡಲ್​ವುಡ್ ಅಂಗಳದಲ್ಲಿ ಪ್ರತೀ ದಿನ ಒಂದಿಲ್ಲೊಂದು ಸ್ಟಾರ್ ನಟನ ಮುಖವಾಡ ಕಳಚುತ್ತಾ ಬರ್ತಿದೆ. ಹತ್ತು ವರ್ಷದಿಂದ ಚಿತ್ರರಂಗದಲ್ಲಿ ನೊಂದು ಬೆಂದಂತಹ ಸಂಗೀತಾ ಭಟ್, ಇತ್ತೀಚೆಗೆ ತಮ್ಮ ಕಹಿ ನೆನಪುಗಳ ಬುತ್ತಿಯನ್ನ ತೆರೆದಿಟ್ಟಿದ್ದರು. ಅದರ ಬೆನ್ನಲ್ಲೇ ಸಂಜನಾ ಕೂಡ ಆರೋಪ ಮಾಡಿದ್ರು. ಇದೀಗ ಮತ್ತೊಬ್ಬ ಕನ್ನಡದ ಸೂಪರ್ ಸ್ಟಾರ್ ಮುಖ ಕಳಚಿಟ್ಟಿದ್ದಾರೆ ಕನ್ನಡದ ಸೆನ್ಸೇಷನಲ್ ನಟೀಮಣಿ ಶ್ರುತಿ ಹರಿಹರನ್.

ಬಹುಭಾಷಾ ಸ್ಟಾರ್ ಆಗಿ ಮಿಂಚ್ತಿರೋ ಕನ್ನಡದ ಮಿಸ್ಟರ್ ಪರ್ಫೆಕ್ಟ್ ಅರ್ಜುನ್ ಸರ್ಜಾರಲ್ಲೂ ಡಿಫೆಕ್ಟ್​ಗಳಿವೆ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಬರೋಬ್ಬರಿ 30 ವರ್ಷದಿಂದ ಚಿತ್ರರಂಗದಲ್ಲಿರೋ ಅರ್ಜುನ್ ಸರ್ಜಾ, ಇಲ್ಲಿಯವರೆಗೂ ಒಂದು ಕೆಟ್ಟ ಕಾಂಟ್ರವರ್ಸಿ ಕೂಡ ಮಾಡಿಕೊಂಡವ್ರಲ್ಲ. ಆದ್ರೀಗ, ಮೀ ಟೂ ಮೂಲಕ ಅವ್ರ ಕರಾಳ ಮುಖ ಬಯಲಾಗಿದೆ. ಎಲ್ಲರ ಎದುರು ಅರ್ಜುನ್ ಸರ್ಜಾ ತಲೆತಗ್ಗಿಸುವಂತಾಗಿದೆ.

ಸ್ಯಾಂಡಲ್​ವುಡ್​ನಲ್ಲಿ ಭುಗಿಲೆದ್ದ #Metoo ಘಾಟು..!!

ಸ್ಟಾರ್​ಗಳ ಕರಾಳ ಮುಖ ಕಳಚಿಡ್ತಿರೋ ನಟೀಮಣಿಯರು

ಬಾಲಿವುಡ್ ಅಂಗಳದಲ್ಲಿ ಶುರುವಾದ ಮೀ ಟೂ ಅಭಿಯಾನ ಇದೀಗ ದೇಶಾದ್ಯಂತ ಬಹುದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಬರೀ ಬಣ್ಣದಲೋಕಕ್ಕೆ ಸೀಮಿತವಾಗದ ಮೀ ಟೂ, ಕ್ರಿಕೆಟ್, ರಾಜಕೀಯ ಸೇರಿದಂತೆ ಪ್ರತೀ ಕ್ಷೇತ್ರಕ್ಕೂ ಕಿಚ್ಚು ಹತ್ತಿಸ್ತಿದೆ. ಅದ್ರಲ್ಲೂ ಚಿತ್ರರಂಗದಲ್ಲಿ ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯ ಘಟನೆಗಳು ನಿತ್ಯ ನಿರಂತರ ನಡೀತಾನೇ ಬರ್ತಿವೆ. ಮಾನ, ಮರ್ಯಾದೆಗೆ ಅಂಜಿ ಗೌರಮ್ಮಗಳಂತೆ ತಮ್ಮ ನೋವುಗಳನ್ನ ತಮ್ಮಲ್ಲೇ ಇಟ್ಟುಕೊಂಡು ಸೈಲೆಂಟ್ ಆಗಿಬಿಟ್ಟಿದ್ದ ನೊಂದ ನಟೀಮಣಿಗಳು ಇದೀಗ ಒಬ್ಬೊಬ್ಬರಾಗಿ ಬಾಯಿ ಬಿಡೋಕ್ಕೆ ಮುಂದಾಗಿದ್ದಾರೆ.

ಪ್ರೂವ್ ಆಯ್ತು ರಘು ದೀಕ್ಷಿತ್ ಲೈಂಗಿಕ ದೌರ್ಜನ್ಯ..!

ಕ್ಷಮೆ ಯಾಚಿಸಿದ್ರೆ ಪಾಪ ಪ್ರಾಯಶ್ಚಿತ್ತ ಆಗಿಬಿಡುತ್ತಾ ರಘು..?

ಖ್ಯಾತ ಗಾಯಕ ರಘು ದೀಕ್ಷಿತ್ ಮೇಲೆ ತನ್ನ ಸ್ನೇಹಿತೆಗಾದ ಕಹಿ ಘಟನೆಗಳನ್ನ ಗಂಭೀರವಾಗಿ ಬಿಚ್ಚಿಟ್ಟಿದ್ದ ಗಾಯಕಿ ಚಿನ್ಮಯಿ, ಕೊನೆಗೂ ರಘು ದೀಕ್ಷಿತ್ ತಮ್ಮ ತಪ್ಪನ್ನ ಒಪ್ಪಿಕೊಂಡು ಕ್ಷಮೆ ಯಾಚಿಸುವಂತಾಗಿತ್ತು. ಬರೀ ಕ್ಷಮೆ ಕೇಳಿದ್ರೆ ಮಾಡಿದ ಪಾಪ ಪ್ರಾಯಶ್ಚಿತ್ತ ಆಗಿಬಿಡುತ್ತಾ ಅನ್ನೋದು ಹಲವ್ರ ಪ್ರಶ್ನೆ. ಅದೂ ಕೂಡ ನಿಜಾನೇ. ಮಾಡಿದ ಪಾಪಕ್ಕೆ ಶಿಕ್ಷೆ ಆಗಲೇಬೇಕು ಅನ್ನೋದು ಸತ್ಯದ ಮಾತು. ಅದೇನೇ ಇರಲಿ, ಈ ಮೂಲಕ ಕನ್ನಡದಲ್ಲಿ ತೆರೆದುಕೊಂಡ ಮೀ ಟೂ, ಆರ್​ಡಿಎಕ್ಸ್ ಬಾಂಬ್​ಗಳಂತೆ ಸಾಲು ಸಾಲಾಗಿ ಬ್ಲಾಸ್ಟ್ ಆಗ್ತಾ ಬರ್ತಿರೋದು ಗೊತ್ತೇಯಿದೆ.

https://www.youtube.com/watch?v=IaJNnEcmYps

10 ವರ್ಷದ ಬೆಂಕಿ ಉಂಡೆಯನ್ನ ಹೊರಹಾಕಿದ ಸಂಗೀತಾ ಭಟ್..!

ಕಾಮುಕರ ಕರಾಳ ಮುಖಗಳಿಂದ ದೂರವಿರೋ ನೊಂದ ನಟಿ..!!

ಹತ್ತು ವರ್ಷದಿಂದ ಹತ್ತಾರು ಸಿನಿಮಾಗಳಲ್ಲಿ ನಟಿಸಿ ಅದ್ಭುತ ಕಲಾವಿದೆ ಅನಿಸಿಕೊಂಡಂತಹ ಸಂಗೀತಾ ಭಟ್ ಕೂಡ ಇತ್ತೀಚೆಗೆ ತುಂಬಾ ಸುದೀರ್ಘವಾಗಿ ತಮ್ಮ ಕಹಿ ಅನುಭವಗಳನ್ನ ಹಂಚಿಕೊಂಡಿದ್ದರು. ಅವಕಾಶಗಳಿಗಾಗಿ ಚಿತ್ರರಂಗದ ನಟ, ನಿರ್ದೇಶಕ ಹಾಗೂ ನಿರ್ಮಾಪಕರು ಹೇಗೆಲ್ಲಾ ಮಿಸ್ ಯೂಸ್ ಮಾಡ್ಕೋತಾರೆ ಅನ್ನೋದನ್ನ ಪುಟಾನುಗಟ್ಟಲೆ ವಿಸ್ತಾರವಾಗಿ ಬರೆದುಕೊಂಡು ನೋವನ್ನ ಹೊರಹಾಕಿದ್ರು. ಅದಕ್ಕೆ ಸಾಕಷ್ಟು ಮಂದಿ ನಟೀಮಣಿಯರು ಕೂಡ ಸಾಥ್ ಕೊಟ್ಟಿದ್ದರು.

12 ವರ್ಷದ ಹಿಂದಿನ ಗಂಡ- ಹೆಂಡತಿ ಗುಟ್ಟು ತೆರೆದಿಟ್ಟಿದ್ದ ಸಂಜನಾ..!

50 ಲಿಪ್ ಲಾಕ್, 100 ರೀ ಟೇಕ್​ಗಳ ರೋಮಾಂಚಕ ಕಥೆಯದು..!

ರವಿ ಶ್ರೀವತ್ಸ ನಿರ್ದೇಶನದ ಗಂಡ ಹೆಂಡತಿ ಸಿನಿಮಾ ಬಂದು 12 ವರ್ಷಗಳೇ ಕಳೆದಿದೆ. ಆಗ ಮುಗ್ಧಳಂತೆ ಸಿನಿಮಾ ಸಂತೆಗೆ ಬಂದಂತಹ ನಟಿ ಸಂಜನಾಗೆ ಬಾಲಿವುಡ್​ನ ಮರ್ಡರ್ ಸಿನಿಮಾ ಮೀರಿಸುವಂತಹ ರೊಮ್ಯಾಂಟಿಕ್ ಸಿನಿಮಾ ಮಾಡಿಸುವಲ್ಲಿ ಚಿತ್ರತಂಡ ಯಶಸ್ವಿ ಆಗಿತ್ತು. ಒಂದು ಕಿಸ್ ಸೀನ್ ಅಂತ ಹೇಳಿ 50 ಕಿಸ್ ಸೀನ್​ಗಳನ್ನ ಮಾಡಿಸಿದ್ರು. ಅದಕ್ಕಾಗಿ 100 ರೀ ಟೇಕ್​ಗಳನ್ನ ತೆಗೆಯಲಾಗಿತ್ತು. ಹೀಗಂತ ಇತ್ತೀಚೆಗೆ ಖುದ್ದು ಸಂಜನಾನೇ ಬಹಿರಂಗವಾಗಿ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನ ಹೊರಹಾಕಿದ್ರು. ಅಷ್ಟೇ ಆಲ್ಲ, ಇದಕ್ಕೆಲ್ಲಾ ನೇರ ಹೊಣೆ ನಿರ್ದೇಶಕ ರವಿ ಶ್ರೀವತ್ಸ ಅಂತ ಆರೋಪ ಮಾಡಿ ಅಮೆರಿಕಾ ಫ್ಲೈಟ್ ಹತ್ತಿದ್ರು ಸಂಜನಾ.

ವಿಸ್ಮಯ ಚಿತ್ರದಲ್ಲಿ ನಡೆದಿತ್ತಾ ಅವಿಸ್ಮಯಕಾರಿ ಘಟನೆಗಳು..?

ಅರ್ಜುನ್ ಸರ್ಜಾ ಮುಖವಾಡ ಕಳಚಿಟ್ಟ ಶ್ರುತಿ ಹರಿಹರನ್..!

ಗಾಯಕಿ ಚಿನ್ಮಯಿ, ನಟಿ ಸಂಗೀತಾ ಭಟ್ ಹಾಗೂ ನಟಿ ಸಂಜನಾ ನಂತ್ರ ಇದೀಗ ನಟಿ ಶ್ರುತಿ ಹರನ್ ಕೂಡ ಸಿಕ್ಸ್ ಪ್ಯಾಕ್ ಹೀರೋ ಅರ್ಜುನ್ ಸರ್ಜಾ ಮೇಲೆ ಹುಬ್ಬೇರಿಸೋ ಅಂತಹ ಆರೋಪ ಮಾಡಿದ್ದಾರೆ. ಹೌದು.. ವಿಸ್ಮಯ ಚಿತ್ರದಲ್ಲಿ ಅರ್ಜುನ್ ಸರ್ಜಾ ತೆರೆಹಂಚಿಕೊಂಡಿದ್ದ ಶ್ರುತಿ ಹರಿಹರನ್​​ಗೆ, ಮಿಸ್ಟರ್ ಪರ್ಫೆಕ್ಟ್ ಹೇಗೆಲ್ಲಾ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ರು ಅನ್ನೋದನ್ನ ಬಹಿರಂಗ ಪಡಿಸಿದ್ದಾರೆ ಶ್ರುತಿ.

ಕಳೆದ ವರ್ಷ ಜುಲೈನಲ್ಲಿ ತೆರೆಕಂಡಂತಹ ಌಕ್ಷನ್ ಥ್ರಿಲ್ಲರ್ ಸಿನಿಮಾ ವಿಸ್ಮಯ. ತಮಿಳು- ಕನ್ನಡದಲ್ಲಿ ತೆರೆಕಂಡಂತಹ ಈ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಪತ್ನಿ ಪಾತ್ರದಲ್ಲಿ ಶ್ರುತಿ ಹರಿಹರನ್ ಬಣ್ಣ ಹಚ್ಚಿದ್ದರು. ಗಂಡ- ಹೆಂಡತಿ ಅಂದ್ಮೇಲೆ ಅಲ್ಲೊಂದಷ್ಟು ಇಂಟಿಮಸಿ ಸೀನ್ಸ್ ಇದ್ದೇ ಇರುತ್ತೆ. ಸದ್ಯ ಈ ಸಿನಿಮಾದಲ್ಲೂ ಪತ್ನಿಯನ್ನ ತಬ್ಬಿಕೊಳ್ಳೋ ಅಂತಹ ಸೀಕ್ವೆನ್ಸ್​ನಲ್ಲಿ ಸರ್ಜಾ, ಶ್ರುತಿಯನ್ನ ಅಗತ್ಯಕ್ಕಿಂತ ಹೆಚ್ಚಾಗಿ ಬಿಗಿಹಿಡಿದು ತಬ್ಬಿಕೊಳ್ತಿದ್ರಂತೆ. ಹೀಗಂತ ಸಾಮಾಜಿಕ ಜಾಲತಾಣದಲ್ಲಿ ಶ್ರುತಿ ಗಂಭೀರ ಆರೋಪ ಮಾಡಿದ್ದಾರೆ.

ರಿಹರ್ಸಲ್​ನಲ್ಲಿ ಅಸಭ್ಯವಾಗಿ ವರ್ತಿಸಿದ್ದ ಅರ್ಜುನ್ ಸರ್ಜಾ..!

ಶೂಟಿಂಗ್​ಗೆ ಮಾತ್ರ ಬರೋದಾಗಿ ಹೇಳಿಬಂದಿದ್ದ ಶ್ರುತಿ..!!

ಶೂಟಿಂಗ್​ಗೂ ಮುನ್ನ ನಡೆದ ರಿಹರ್ಸಲ್​ಗಳಲ್ಲಿ ಅರ್ಜುನ್ ಸರ್ಜಾ ಶ್ರುತಿಯನ್ನ ಅಗತ್ಯಕ್ಕಿಂತ ಹೆಚ್ಚಾಗಿ ತಬ್ಬಿಕೊಳ್ತಿದ್ದರು. ಅವ್ರ ಅಸಭ್ಯ ವರ್ತನೆಯಿಂದ ವಿಚಲಿತರಾದ ಶ್ರುತಿ ನೇರವಾಗಿ, ಅಲ್ಲಿಂದ ಕಾಲು ಕಿತ್ತಿದ್ದರು. ಅಷ್ಟೇ ಅಲ್ಲ, ಸ್ಟ್ರೈಟ್ ಆಗಿ ಇನ್ಮುಂದೆ ಶೂಟಿಂಗ್ ಮಾತ್ರ ಬರೋದಾಗಿ ಹೇಳಿ ಹೋಗಿದ್ದರು ಅನ್ನೋದು ಇದೀಗ ಬಯಲಾಗಿರೋದು ಇಡೀ ಸೌತ್ ಸಿನಿದುನಿಯಾನ ತಲ್ಲಣಗೊಳಿಸಿದೆ.

ಶೂಟಿಂಗ್ ನಂತ್ರ ಕಾಫಿ, ಡಿನ್ನರ್, ರೆಸಾರ್ಟ್​ಗೆ ಆಹ್ವಾನ..?

ಮತ್ತಷ್ಟು ಡಿಟೈಲ್ಸ್ ಮಾಧ್ಯಮಗೋಷ್ಠಿಯಲ್ಲಿ ರಿವೀಲ್..!!

ಸಿನಿಮಾ ಅನ್ನೋದು ಬರೀ ನಟನೆಗಷ್ಟೇ ಸೀಮಿತ ಆಗಿರೋದಿಲ್ಲ. ಕಲಾವಿದರ ನಡುವೆ ಉತ್ತಮ ಸ್ನೇಹಕ್ಕೂ ಕಾರಣವಾಗುತ್ತೆ. ಆದ್ರೆ ಅದು ಅದ್ರ ಗಡಿ ಮೀರಿದರೆ ಏನೆಲ್ಲಾ ಆಗುತ್ತೆ ಅನ್ನೋದಕ್ಕೆ ಇದು ಬೆಸ್ಟ್ ಎಕ್ಸಾಂಪಲ್. ಹೌದು... ಅರ್ಜುನ್ ಸರ್ಜಾ ಸಿನಿಮಾ ಶೂಟಿಂಗ್ ನಂತ್ರ ಶ್ರುತಿಯನ್ನ ಕಾಫಿ, ಡಿನ್ನರ್ ಅಂತೆಲ್ಲಾ ರೆಸಾರ್ಟ್​ಗೆ ಕರೀತಿದ್ದರಂತೆ. ಸದ್ಯ ಸರ್ಜಾ ಮೇಲೆ ಮೀ ಟೂ ಬಾಂಬ್ ಸಿಡಿಸಿರೋ ಶ್ರುತಿ, ನಾಳೆ ಸುದ್ದಿಗೋಷ್ಠಿ ನಡೆಸಿ ಮತ್ತಷ್ಟು ವಿಚಾರಗಳನ್ನ ಬಹಿರಂಗಪಡಿಸೋ ಸೂಚನೆ ಕೊಟ್ಟಿದ್ದಾರೆ.

ಕಾಸ್ಟಿಂಗ್ ಕೌಚ್ ಬಗ್ಗೆ ಮೌನ ಮುರಿದಿದ್ದ ಹರಿಹರನ್..!!

ಮಂಚಕ್ಕೆ ಕರೆದಿದ್ದ ನಿರ್ಮಾಪಕರಿಗೆ ಮಂಗಳಾರತಿ ಎತ್ತಿದ್ದ ನಟಿ

ಈ ಹಿಂದೆ ಕೂಡ ನ್ಯಾಷನಲ್ ಸೆಮಿನಾರ್ ಒಂದರಲ್ಲಿ ಶ್ರುತಿ ಹರಿಹರನ್ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಅಸಹಾಯಕತೆ ಕುರಿತು ಮಾತನಾಡಿದ್ರು. ತಮ್ಮದೇ ಲೂಸಿಯಾ ಸಿನಿಮಾನ ತಮಿಳಿನಲ್ಲಿ ಮಾಡೋಕ್ಕೆ ಮುಂದಾಗಿದ್ದ ನಿರ್ಮಾಪಕರು, ಮೂರು ಜನ ಮಂಚಕ್ಕೆ ಕರೆದು ಹಂಚಿಕೊಳ್ಳೋ ವಿಚಾರವನ್ನ ಓಪನ್ ಆಗಿ ಮಾತನಾಡಿದ್ರು. ಅಷ್ಟೇ ಅಲ್ಲ, ಅವ್ರ ಮುಖಕ್ಕೆ ದೂರವಾಣಿ ಮೂಲಕವೇ ಮಂಗಳಾರತಿ ಕೂಡ ಎತ್ತಿದ್ರು ಶ್ರುತಿ ಹರಿಹರನ್.

ಹೀಗೆ ತುಂಬಾ ಧೈರ್ಯವಾಗಿ ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿದ್ದ ಶ್ರುತಿ ಹರಿಹರನ್, ಇದೀಗ ಅರ್ಜುನ್ ಸರ್ಜಾ ಮೇಲೆ ಆರೋಪ ಮಾಡಿರೋದು ಶಾಕಿಂಗ್ ಅನಿಸಿದೆ. ದೊಡ್ಡ ಸ್ಟಾರ್ ನಟನ ಮೇಲೆ ಈ ರೀತಿ ಆರೋಪ ಮಾಡ್ತಿದ್ದಾರೆ ಅಂದಾಗ ಶ್ರುತಿ ಎಷ್ಟು ನೊಂದಿದ್ದಾರೆ ಅನ್ನೋದನ್ನ ನೀವೇ ಊಹಿಸಿಕೊಳ್ಳಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES