Top

ಶಸ್ತ್ರಾಸ್ತ್ರ ಪ್ರದರ್ಶನ: ಮುತ್ತಪ್ಪ ರೈಗೆ ಸಂಕಷ್ಟ ತಂದಿದ್ದು ಯಾರು ಗೊತ್ತಾ?

ಶಸ್ತ್ರಾಸ್ತ್ರ ಪ್ರದರ್ಶನ:  ಮುತ್ತಪ್ಪ ರೈಗೆ ಸಂಕಷ್ಟ ತಂದಿದ್ದು ಯಾರು ಗೊತ್ತಾ?
X

ಆಯುಧ ಪೂಜೆ ದಿನ ಶಸ್ತ್ರಾಸ್ತ್ರ ಪೂಜೆ ಮಾಡಿದ ಪೊಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಕ್ಕಾಗಿ ಮುತ್ತಪ್ಪ ರೈ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಮುತ್ತಪ್ಪ ರೈ ಸಮಸ್ಯೆ ಎದುರಿಸುವಂತೆ ಹಾಕಿದೆ.

ಆಯುಧ ಪೂಜೆ ಮಾಡಲು ಮುತ್ತಪ್ಪ ರೈ ಮನೆಗೆ ಬಂದ ಅರ್ಚಕ ಪೂಜೆ ಮಾಡಿ ನಂತರ ಖುಷಿಯಲ್ಲಿ ಮುತ್ತಪ್ಪ ರೈ ಜೊತೆ ಪೊಟೊ ತೆಗೆದುಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ಪೊಟೊದಲ್ಲಿ ಮುತ್ತಪ್ಪ ರೈ ಆಯುಧಗಳ ಜೊತೆ ಇರುವುದರಿಂದ ಪೊಟೊ ವೈರಲ್ ಆಗಿದೆ.

ಹಲವು ವರ್ಷಗಳಿಂದ ಪೊಲೀಸ್ ಠಾಣೆಯ ಮೆಟ್ಟಿಲೇರದ ಮುತ್ತಪ್ಪ ರೈ ಗೆ ಪೊಟೊ ವೈರಲ್ ಆದ ಹಿನ್ನಲೆ ಸಿಸಿಬಿ ಪೊಲೀಸರಿಂದ ನೋಟಿಸ್ ಜಾರಿ ಮಾಡಲಾಗಿತ್ತು.ಹೀಗಾಗಿ ಶನಿವಾರ ಸಿಸಿಬಿ ಅಧಿಕಾರಿಗಳ ಮುಂದೆ ಮುತ್ತಪ್ಪ ರೈ ಹಾಜರಾಗಿದ್ದಾರೆ. ಸಿಸಿಬಿ ಒಸಿಡಬ್ಲ್ಯೂ ಎಸಿಪಿ ಮರಿಯಪ್ಪ ಡಿಸಿಪಿ ಗಿರೀಶ್ ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಮುತ್ತಪ್ಪ ರೈ ಪೂಜೆಗೆ ಬಳಸಿದ್ದ ಎಲ್ಲಾ ಶಸ್ತ್ರಾಸ್ತ್ರಗಳ ಕುರಿತು ದಾಖಲೆ ಹಾಜರುಪಡಿಸಿದ್ದು ಇನ್ನೂ ಮುತ್ತಪ್ಪ ರೈ ಹೇಳಿಕೆಯನ್ನು ಸಿಸಿಬಿ ಅಧಿಕಾರಿಗಳು ದಖಾಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.

Next Story

RELATED STORIES