Top

ಮಾಜಿ ಶಾಸಕನಿಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ..!

ಮಾಜಿ ಶಾಸಕನಿಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ..!
X

ದಾವಣಗೆರೆ: ಮಾಜಿ ಶಾಸಕರೊಬ್ಬರಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದು, ಅಭಿಷೇಕದ ವೀಡಿಯೋ ಫುಲ್ ವೈರಲ್ ಆಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಿ.ಪಿ.ಹರೀಶ್‌ಗೆ ಹಾಲಿನ ಅಭಿಷೇಕ ಮಾಡಲಾಗಿದೆ.

ಹರಿಹರದ ಹಳ್ಳದಕೇರಿ ಗರಡಿ ಮನೆ ಗಣೇಶ ವಿಸರ್ಜನೆ ವೇಳೆ , ಕಾರ್ಯಕ್ರಮಕ್ಕೆ ಬಂದಿದ್ದ ಮಾಜಿ ಶಾಸಕ ಬಿ.ಪಿ.ಹರೀಶ್‌ಗೆ ಎರಡು ಕೊಡ ಹಾಲಿನ ಅಭಿಷೇಕ ಮಾಡಲಾಯಿತು.

ಹಾಲಿನ ಅಭಿಷೇಕದ ನಂತರ ಮಾಜಿ ಶಾಸಕ ಕೇಸರಿ ಶಾಲು ಹಾಕಿ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಅಭಿಷೇಕ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

Next Story

RELATED STORIES