Top

ಹಾವೇರಿಯ ಈ ಹೋರಿ ಬೆಲೆ ಕೇಳಿದರೆ ಬೆಚ್ಚಿ ಬೀಳ್ತಿರ...!

ಹಾವೇರಿಯ ಈ ಹೋರಿ ಬೆಲೆ ಕೇಳಿದರೆ ಬೆಚ್ಚಿ ಬೀಳ್ತಿರ...!
X

ಬಕ್ರೀದ್ ಹಬ್ಬದ ದಿನ ಕುರಿಗಳು ಲಕ್ಷಾಂತರ ರೂ.ಗೆ ಮಾರಾಟವಾಗಿದ್ದು ಕೇಳಿದ್ದೀರಿ. ಉತ್ತರ ಭಾರತದಲ್ಲಿ ಹೋರಿಗಳು ಕೂಡ ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದು ಗಮನಿಸಿದ್ದೀರಿ. ಆದರೆ ಕರ್ನಾಟಕದಲ್ಲಿ ಹೋರಿಯೊಂದು ಲಕ್ಷಾಂತರ ರೂಪಾಯಿಗೆ ಮಾರಾಟವಾಗಿದ್ದನ್ನು ಕೇಳಿದ್ದಿರಾ?

ಹೌದು, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಖುರ್ದಕೋಡಿಹಳ್ಳಿ ಗ್ರಾಮದ ಕೊಬ್ಬರಿ ಹೋರಿಯೊಂದು 10 ಲಕ್ಷ ರೂ.ಗೆ ಮಾರಾಟವಾಗಿದೆ.

ಖುರ್ದಕೋಡಿಹಳ್ಳಿ ಗ್ರಾಮದ ರೇವಣ ಸಿದ್ದಪ್ಪ ಅವರಿಗೆ ಸೇರಿದ ಈ ಹೋರಿಯನ್ನು ತಮಿಳುನಾಡಿನ ವೆಲ್ಲಂಪಾಡಿಯ ರೈತ ಸೆಲ್ವಂ ಎಂಬುವವರು 10 ಲಕ್ಷ ರೂ.ಗೆ ಖರೀದಿ ಮಾಡಿದ್ದಾರೆ.

ರೇವಣ್ಣ ಸಿದ್ದಪ್ಪ 3 ವರ್ಷದ ಹಿಂದೆ ಆಂಧ್ರಪ್ರದೇಶದಿಂದ ಎರಡೂವರೆ ಲಕ್ಷ ರೂ. ಕೊಟ್ಟು ಈ ಹೋರಿಯನ್ನು ಖರೀದಿಸಿದ್ದರು.

8ರಿಂದ 10 ನಿಮಿಷದಲ್ಲಿ 250 ಮೀಟರ್​ ದೂರವರೆಗೆ ವೇಗವಾಗಿ ಓಡಬಲ್ಲ ಈ ಹೋರಿಯನ್ನು ಗ್ರಾಮೀಣ ಪ್ರದೇಶದಲ್ಲಿ ಹೋರಿ ಓಟದ ಸ್ಪರ್ಧೆ, ಎತ್ತಿಗಾಡಿ ಸ್ಪರ್ಧೆ ಮುಂತಾದ ಸ್ಪರ್ಧೆಗಳಿಗೆ ಕರೆದುಕೊಂಡು ಹೋಗಲಾಗುತ್ತಿತ್ತು ಎಂದು ಹೇಳಲಾಗಿದೆ.

Next Story

RELATED STORIES