Top

ಟೆಸ್ಟ್ ಪಾಸಾಯ್ತು, ಏಕದಿನದ ತಯಾರಿ ಶುರು

ಟೆಸ್ಟ್ ಪಾಸಾಯ್ತು, ಏಕದಿನದ ತಯಾರಿ ಶುರು
X

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್​ಸ್ವೀಪ್ ಮಾಡಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಭಾರತ ತಂಡ ಸಣ್ಣಪುಟ್ಟ ಬದಲಾವಣೆಯೊಂದಿಗೆ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಭಾನುವಾರದಿಂದ ನಡೆಯುವ ಮೊದಲ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡುವ ಗುರಿ ಭಾರತೀಯ ಆಟಗಾರರಲ್ಲಿದೆ.

ಗುವಾಹಟಿಯಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ಹಾಟ್ ಫೇವರಿಟ್ ಆಗಿದ್ದರೆ, ಟೆಸ್ಟ್ ಸರಣಿಯಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯನ್ನು ಕೆರಿಬಿಯನ್ ಆಟಗಾರರು ಹೊಂದಿದ್ದಾರೆ.

ಬರ್ಸಾಪರ ಕ್ರೀಡಾಂಗಣದಲ್ಲಿ ಅಂಕಣಕ್ಕಿಳಿದ ಭಾರತೀಯ ಆಟಗಾರರು ಅಭ್ಯಾಸ ನಡೆಸಿದರು. ಟೆಸ್ಟ್ ಸರಣಿ ಬೇಗನೇ ಗೆದ್ದಿದ್ದರಿಂದ ಹೆಚ್ಚು ದಿನ ವಿಶ್ರಾಂತಿ ಪಡೆದಿದ್ದರಿಂದ ಆಟಗಾರರು ಶನಿವಾರ ಲಘು ಅಭ್ಯಾಸ ನಡೆಸಿದರು.

ನಾಯಕ ವಿರಾಟ್ ಕೊಹ್ಲಿ, ಧೋನಿ, ಕೆ.ಎಲ್. ರಾಹುಲ್, ಉಮೇಶ್ ಯಾದವ್ ಮತ್ತು ಮೊಹಮದ್ ಶಮಿ ಫುಟ್ಬಾಲ್ ಅನ್ನು ಒಬ್ಬರೇ ಕಾಲಿನಲ್ಲಿ ಆಡಿಸುವ ಕೀಪಿ-ಯುಪಿ ಆಟದ ಮೂಲಕ ಅಭ್ಯಾಸ ನಡೆಸಿದ್ದು ಗಮನ ಸೆಳೆಯಿತು.

ಟೆಸ್ಟ್ ಕ್ರಿಕೆಟ್​ಗೆ ಭರ್ಜರಿ ಎಂಟ್ರಿ ಕೊಟ್ಟಿರುವ ರಿಷಭ್ ಪಂತ್, ಏಕದಿನ ಕ್ರಿಕೆಟ್​ಗೆ ಕಾಲಿಡಲು ಹಾತೊರೆಯುತ್ತಿದ್ದಾರೆ. ಈ ಮೂಲಕ ಧೋನಿ ಅವರನ್ನು ಹೊರಗಿಡಲಾಗುತ್ತದೆಯೇ ಅಥವಾ ಇಬ್ಬರನ್ನೂ ಆಡಿಸಲಾಗುತ್ತದೆಯೇ ಎಂಬುದು ಕಾದು ನೋಡಬೇಕಿದೆ.

Next Story

RELATED STORIES