Top

ಸಾವಿನಲ್ಲೂ ಆದರ್ಶ ಮೆರೆದ ರಾವಣನ ಪಾತ್ರಧಾರಿ!

ಸಾವಿನಲ್ಲೂ ಆದರ್ಶ ಮೆರೆದ ರಾವಣನ ಪಾತ್ರಧಾರಿ!
X

ರಾಮ- ರಾವಣ ಒಳ್ಳೆಯದು ಮತ್ತು ಕೆಟ್ಟದರ ಎರಡು ಮುಖಗಳು. ರಾಮ ಒಳ್ಳೆಯವನು, ರಾವಣ ಕೆಟ್ಟವನು ಎಂದು ಕಥೆಗಳು ಹೇಳುತ್ತಾ ಬಂದಿವೆ. ಆದರೆ ರಾವಣನ ಪಾತ್ರ ನಿಭಾಯಿಸುತ್ತಾ ಬಂದಿದ್ದ ಕಲಾವಿದನೊಬ್ಬ ಜನರ ಪ್ರಾಣ ರಕ್ಷಿಸುತ್ತಾ ತನ್ನ ಪ್ರಾಣವನ್ನೇ ತ್ಯಾಗ ಮಾಡಿ ರಾಮನ ಆದರ್ಶ ಮೆರೆದಿದ್ದಾನೆ!

ಹೌದು, ಪಂಜಾಬ್​ನ ಅಮೃತಸರ್​ನಲ್ಲಿ ಶುಕ್ರವಾರ ವಿಜಯದಶಮಿಯಂದು ನಡೆದ ರೈಲು ದುರಂತದಲ್ಲಿ 60ಕ್ಕೂ ಹೆಚ್ಚು ಮೃತ ಪಟ್ಟಿದ್ದರು. ರಾವಣನ ಪ್ರತಿಕೃತಿ ದಹನ ವೀಕ್ಷಿಸುತ್ತಿದ್ದ ನಾಗರೀಕರ ಮೇಲೆ ರೈಲು ಹರಿದು ಈ ದುರಂತ ಸಂಭವಿಸಿತ್ತು.

ಆದರೆ ಪ್ರತಿ ವರ್ಷದಂತೆ ಈ ವರ್ಷವೂ ರಾವಣನ ಪಾತ್ರ ನಿಭಾಯಿಸುತ್ತಿದ್ದ ಕಲಾವಿದ ದಲ್ಬೀರ್ ಸಿಂಗ್, ರೈಲು ದುರಂತದ ವೇಳೆ ಹಲವಾರು ಮಂದಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ಅಸುನೀಗಿದ್ದಾರೆ.

ರಾವಣನ ಪಾತ್ರ ಮುಗಿಸಿದ ನಂತರ ಸುಮಾರು 7 ಗಂಟೆ ಸುಮಾರಿಗೆ ರಾವಣನ ಪ್ರತಿಕೃತಿಯನ್ನು ಪಟಾಕಿ ಸೇರಿದಂತೆ ಸಿಡಿಮದ್ದುಗಳನ್ನು ಸಿಡಿಸಿ ಸುಡುವ ಕಾರ್ಯಕ್ರಮವನ್ನು ವೀಕ್ಷಿಸಲು ದಲ್ಬೀರ್ ಸಿಂಗ್ ಉತ್ತಮ ಜಾಗ ಹುಡುಕುತ್ತ ಹೊರಟರು. ರೈಲ್ವೆ ಟ್ರ್ಯಾಕ್ ಬಳಿ ಬರುತ್ತಿದ್ದ ಅವರಿಗೆ ದೂರದಲ್ಲಿ ವೇಗವಾಗಿ ಬರುತ್ತಿದ್ದ ರೈಲನ್ನು ಗಮನಿಸಿದರು.

ಕೂಡಲೇ ಟ್ರ್ಯಾಕ್ ಮೇಲೆ ಕೂಗತ್ತಾ ಎಲ್ಲರನ್ನೂ ಎಚ್ಚರಿಸುತ್ತಾ ಓಡತೊಡಗಿದರು. ಆದರೆ ಕ್ಷಣಾರ್ಧದಲ್ಲಿ ವೇಗವಾಗಿ ಬಂದ ರೈಲು ಅವರ ಮೇಲೆ ಹರಿಹಾಯ್ದಿತು. ಅಷ್ಟರಲ್ಲಿ ಹಲವಾರು ಮಂದಿ ಪ್ರಾಣ ಕೂಡ ಉಳಿಯಿತು. ರಾಮಲೀಲಾದಲ್ಲಿ ವಿವಿಧ ಪಾತ್ರಗಳನ್ನು ನಿಭಾಯಿಸುತ್ತಾ ಬಂದಿದ್ದ ದಲ್ಬೀರ್ ಸಿಂಗ್, ರಾವಣನ ಪಾತ್ರ ನಿಭಾಯಿಸಿ ರಾಮನ ಆದರ್ಶದೊಂದಿಗೆ ಮೃತಪಟ್ಟಿದ್ದು ದುರ್ದೈವ.

Next Story

RELATED STORIES