Top

ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಧರ್ಮ ಒಡೆಯುತ್ತೆ- ಶೋಭಾ

ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಧರ್ಮ ಒಡೆಯುತ್ತೆ- ಶೋಭಾ
X

ಉಡುಪಿ: ವೋಟ್ ಬ್ಯಾಂಕ್‌ಗಾಗಿ ಲಿಂಗಾಯಿತ ವೀರಶೈವರನ್ನು ಒಡಿಯುವ ಷಡ್ಯಂತ್ರ ಮಾಡಿದ್ರು. ಅವರದ್ದೇ ಮಂತ್ರಿಗಳನ್ನು ಛೂಬಿಟ್ಟು ಜಾತಿ- ಜಾತಿ ಒಡೆಯುವ ಪ್ರಯತ್ನ ಮಾಡಿದರು. ಇದೀಗ ಡಿ.ಕೆ.ಶಿವಕುಮಾರ್ ಬಾಯಿಯಿಂದ ಸತ್ಯ ಹೊರಬಿದ್ದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.

ಉಡುಪಿಯ ಬೈಂದೂರಿನಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಸಚಿವ ಡಿ.ಕೆ.ಶಿವಕುಮಾರ್ ನಾವು ಮಾಡಿದ್ದು ತಪ್ಪಾಗಿದೆ, ಅಕ್ಷಮ್ಯ ಅಪರಾಧ ಆಗಿದೆ ಎಂಬ ಮಾತನ್ನ ಹೇಳಿದ್ದಾರೆ. ಕೊನೆಯಲ್ಲಾದರೂ ಜ್ಞಾನೋದಯವಾಗಿದೆ. 70 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ನಾಯಕರು ದೇಶದಲ್ಲಿ ಜಾತಿ ಒಡೆಯುವುದನ್ನ ಮಾಡಿದ್ದಾರೆ. ಧರ್ಮವನ್ನು ಒಡೆದು ಅಧಿಕಾರದಲ್ಲಿ ಉಳಿಬೇಕು ಎಂಬ ದುರಾಸೆಯಲ್ಲಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಅಲ್ಲದೇ ರಾಜ್ಯದ ಜನಕ್ಕೆ ಇದೆಲ್ಲ ಅರ್ಥವಾಗಿದೆ. ಕಾಂಗ್ರೆಸ್‌ನಲ್ಲಿದ್ದ 120 ಸ್ಥಾನವನ್ನು 78ಕ್ಕೆ ಜನ ಇಳಿಸಿದ್ದಾರೆ. ಈಗ 78 ಸ್ಥಾನ 8 ಕ್ಕೆ ಇಳಿಯುವ ಸೂಚನೆ ರಾಜ್ಯದಲ್ಲಿ ಕಾಣ್ತಾ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಕಾಂಗ್ರೆಸ್ ನಲ್ಲಿ ಕಿತ್ತಾಟ ನಡೆಯುತ್ತಿದೆ. ಮಂತ್ರಿ ಆದವರಿಗೆ, ಆಗದವರಿಗೂ ಅಸಮಾಧಾನ ಅನ್ನುವ ಪರಿಸ್ಥಿತಿ ಇದೆ ಎಂದು ಹೇಳಿದರು.

ಎಂ.ಬಿ.ಪಾಟೀಲ್, ಕುಲಕರ್ಣಿ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಜಾತಿ ಒಡೆಯುವುದಕ್ಕೆ ಪ್ರಯತ್ನ ಮಾಡಿದ್ರು. ಆದ್ರೆ ಇವತ್ತು ಅದೇ ಎಂ.ಬಿ ಪಾಟೀಲ್ ಅವರನ್ನು ದೂರ ಇಟ್ಟಿದ್ದಾರೆ. ಕಾಂಗ್ರೆಸ್ ನ ರಾಜಕಾರಣ ಕೇವಲ ಅವಕಾಶವಾದಿ ರಾಜಕಾರಣ. ಅವರು ಯ್ಯೂಸ್ ಆ್ಯಂಡ್ ಥ್ರೋ. ಉಪಯೋಗಿಸು ಮತ್ತು ಬಿಸಾಡು ಇದು ಅವರ ಪಾಲಿಸಿ. ದೇಶದಲ್ಲಿ ಇದೇ ನಡೆದುಕೊಂಡು ಬಂದಿದೆ. ಕರ್ನಾಟಕದಲ್ಲಿ ಅದನ್ಬು ಪಾಲನೆರ ಮಾಡಿದ್ದಾರೆ. ಮುಂದಿನ ದಿನದಲ್ಲಿ ಕಾಂಗ್ರೆಸ್ ಅನ್ನು ರಾಜ್ಯದ ಜನ ಕಸದ ಬುಟ್ಡಿಗೆ ಹಾಕ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Next Story

RELATED STORIES