Top

ಸ್ಪಾಟ್ ಫಿಕ್ಸಿಂಗ್​: ತಪ್ಪು ಒಪ್ಪಿಕೊಂಡ ಪಾಕ್ ಕ್ರಿಕೆಟಿಗ!

ಸ್ಪಾಟ್ ಫಿಕ್ಸಿಂಗ್​: ತಪ್ಪು ಒಪ್ಪಿಕೊಂಡ ಪಾಕ್ ಕ್ರಿಕೆಟಿಗ!
X

ಸ್ಪಾಟ್ ಫಿಕ್ಸಿಂಗ್ ಬಗ್ಗೆ ವ್ಯಾಪಕ ಅರೋಪ ಕೇಳಿ ಬಂದರೂ ನಿರಾಕರಿಸುತ್ತಾ ಬಂದಿದ್ದ ಪಾಕಿಸ್ತಾನದ ಸ್ಪಿನ್ನರ್ ದನೀಶ್ ಕನೇರಿಯಾ 6 ವರ್ಷಗಳ ನಂತರ ಒಪ್ಪಿಕೊಂಡಿದ್ದೂ ಅಲ್ಲದೇ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

ಇಂಗ್ಲೀಷ್ ಕೌಂಟಿ ಕ್ರಿಕೆಟ್ ಟೂರ್ನಿ ವೇಳೆ ಸ್ಪಾಟ್ ಫಿಕ್ಸಿಂಗ್​ನಲ್ಲಿ ಭಾಗಿಯಾದ ಆರೋಪಕ್ಕಾಗಿ ದನೀಶ್ ಕನೇರಿಯಾ 2012ರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿಷೇಧಿಸಿದೆ.

ನಿಷೇಧಕ್ಕೆ ಒಳಗಾಗಿರುವ ದನೀಶ್ ಕನೇರಿಯಾ ಕ್ಷಮೆಯಾಚಿಸಿ ಪ್ರಕಟಣೆ ಹೊರಡಿಸಿದ್ದು, ಪಾಕಿಸ್ತಾನ ಕ್ರಿಕೆಟ್​ ಮಂಡಳಿ, ಅಭಿಮಾನಿಗಳು ಹಾಗೂ ದೇಶದ ಜನತೆ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ ಎಂದಿದ್ದಾರೆ.

ಬುಕ್ಕಿ ಅನು ಭಟ್ ನನ್ನನ್ನು ಭೇಟಿ ಮಾಡಿದ್ದು ನಿಜ. ಆದರೆ ನಾನು ಈ ವಿಷಯವನ್ನು ತಂಡದ ಗಮನಕ್ಕೆ ತರಲಿಲ್ಲ. ಇದಕ್ಕಾಗಿ ನಾನು ತಕ್ಕ ಬೆಲೆ ತೆರಬೇಕಾಯಿತು ಎಂದು ದನೀಶ್ ಕನೇರಿಯಾ ತಿಳಿಸಿದ್ದಾರೆ.

ದನೀಶ್ ಕನೇರಿಯಾ ಕ್ಷಮೆಯಾಚಿಸಿದರೂ ಅಭಿಮಾನಿಗಳು ಹಾಗೂ ಕ್ರಿಕೆಟ್ ಮಂಡಳಿ ಆಘಾತ ವ್ಯಕ್ತಪಡಿಸಿದ್ದು, ಇದು ಬೆನ್ನಿಗೆ ಚೂರಿ ಹಾಕುವ ಕೆಲಸ ಎಂದು ಟೀಕಿಸಿದ್ದಾರೆ.

Next Story

RELATED STORIES