Top

ವಿಜಯದಶಮಿಯಂದೇ ರಾಜಮಾತೆಗೆ ಮಾತೃವಿಯೋಗ

ವಿಜಯದಶಮಿಯಂದೇ ರಾಜಮಾತೆಗೆ ಮಾತೃವಿಯೋಗ
X

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ದಿನದಂದೇ ರಾಜಮಾತೆ ಪ್ರಮೋದಾ ದೇವಿಗೆ ಮಾತೃವಿಯೋಗವಾಗಿದೆ.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಪ್ರಮೋದಾದೇವಿ ತಾಯಿ ಪುಟ್ಟಚಿನ್ನಮ್ಮಣ್ಣಿ(98) ಸಾವನ್ನಪ್ಪಿದ್ದಾರೆ.

ಅನಾರೋಗ್ಯದ ಕಾರಣ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟಚಿನ್ನಮ್ಮಣ್ಣಿ ಸಾವನ್ನಪ್ಪಿದ್ದಾರೆ. ಘಟನೆಯಿಂದ ಅರಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಇಂದು ವಿಜಯದಶಮಿ ದಸರೆಯ ಕೊನೆಯ ದಿನವಾಗಿದ್ದು, ಕೊನೆಯ ದಿನದ ಕಾರ್ಯಕ್ರಮಗಳಿಗಾಗಿ ಭರ್ಜರಿ ತಯಾರಿ ನಡೆಯುತ್ತಿತ್ತು. ಆದರೆ ಸಾವಿನ ಸುದ್ದಿಯಿಂದ ಅರಮನೆಯ ಸಂಭ್ರಮ ಮಂಕಾಗಿದೆ.

ಅರಮನೆಯೊಳಗೆ ನಡೆಯುವ ಸಾಂಪ್ರದಾಯಿಕ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.

Next Story

RELATED STORIES