Top

ಶಿವರಾಮೇಗೌಡರ ಹಳೇ ಪ್ರಕರಣ ಕೆಣಕಿದ ಲಕ್ಷ್ಮಿ ಬೆಂಬಲಿಗರು

ಶಿವರಾಮೇಗೌಡರ ಹಳೇ ಪ್ರಕರಣ ಕೆಣಕಿದ ಲಕ್ಷ್ಮಿ ಬೆಂಬಲಿಗರು
X

ಮಂಡ್ಯ: ಮಂಡ್ಯ ಲೋಕಸಭಾ ಉಪಚುನಾವಣೆಗೆ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಲಕ್ಷ್ಮಿ ಅಶ್ವಿನ್ ಗೌಡಗೆ ಟಿಕೆಟ್ ಸಿಗದ ಕಾರಣ, ಲಕ್ಷ್ಮಿ ಬೆಂಬಲಿಗರು ಶಿವರಾಮೇಗೌಡರ ವಿರುದ್ಧ ಫೇಸ್‌ಬುಕ್ ವಾರ್ ನಡೆಸಿದ್ದಾರೆ.

ಶಿವರಾಮೇಗೌಡರ ಹಳೇ ಪ್ರಕರಣವಾದ, ಪತ್ರಕರ್ತ ಕೆಂಚನಹಳ್ಳಿ ಗಂಗಾಧರ ಮೂರ್ತಿ ಕೊಲೆ ಕೇಸನ್ನ ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿದ ಲಕ್ಷ್ಮಿ ಬೆಂಬಲಿಗರು, ಗಂಗಾಧರಮೂರ್ತಿ ಕೊಲೆ ಪ್ರಕರಣದಲ್ಲಿ ಶಿವರಾಮೇಗೌಡ ಹೆಸರು ತಳುಕು ಹಾಕಿಕೊಂಡಿತ್ತು.

ಸುಮಾರು 20 ವರ್ಷಗಳ ಹಿಂದೆ ನಾಗಮಂಗಲದಲ್ಲಿ ನಡೆದಿದ್ದ ಕೊಲೆ ಪ್ರಕರಣದ ವಿರುದ್ಧ ಸ್ವತಃ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ ಪ್ರತಿಭಟನೆ ಮಾಡಿದ್ರು.

ಈ ಪ್ರತಿಭಟನೆಯಲ್ಲಿ ಶಿವರಾಮೇಗೌಡರ ವಿರುದ್ಧ ಹರಿಹಾಯ್ದ ಗೌಡರು, ಗಂಗಾಧರಮೂರ್ತಿ ಫೋಟೋ ಹಿಡಿದು ಪ್ರತಿಭಟಿಸಿದ್ದರು. ಈ ಪ್ರಕರಣದಲ್ಲಿ ಶಿವರಾಮೇಗೌಡ ಜೈಲಿಗೆ ಹೋಗಿ ಬಂದಿದ್ದರು.

ಇತ್ತೀಚೆಗೆ ಕೇಸ್ ಖುಲಾಸೆಯಾಗಿತ್ತು.ಆದ್ರೆ ಇದೀಗ ದೇವೇಗೌಡರು ಶಿವರಾಮೇಗೌಡರಿಗೆ ಟಿಕೆಟ್ ಕೊಟ್ಟಿದ್ದಾರೆಂದು ಲಕ್ಷ್ಮಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Next Story

RELATED STORIES