Top

ಶಿವಣ್ಣ ಏನ್ ದಡ್ಡರಾ..?- ನಟ ಕಿಚ್ಚ ಸುದೀಪ್

ಶಿವಣ್ಣ ಏನ್ ದಡ್ಡರಾ..?- ನಟ ಕಿಚ್ಚ ಸುದೀಪ್
X

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಪೀಠಕ್ಕೆ ಭೇಟಿ ನೀಡಿದ ನಟ ಕಿಚ್ಚ ಸುದೀಪ್ , ದಿ ವಿಲನ್ ಸಿನಿಮಾದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದರು.

ಚಿತ್ರದಲ್ಲಿ ಶಿವಣ್ಣಂದು ಗೆಸ್ಟ್ ರೋಲ್ ಇರೋ ಕಾರಣಕ್ಕೆ ಶಿವಣ್ಣನ ಅಭಿಮಾನಿಗಳು ಬೆಂಗಳೂರಿನಲ್ಲಿ ಪ್ರೊಟೆಸ್ಟ್ ಮಾಡೋ ತೀರ್ಮಾನಕ್ಕೆ ಬಂದಿದ್ದಾರೆ. ಈ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿದ ಸುದೀಪ್, ಸಿನಿಮಾ ಕತೆ ಕೇಳಿ ಶಿವಣ್ಣ ಒಪ್ಪಿಕೊಂಡಿರೋದು. ಶಿವಣ್ಣ 35, 40 ವರ್ಷದಿಂದ ಇಂಡಸ್ಟ್ರಿಯಲ್ಲಿ ಇದ್ದಾರೆ.

ಶಿವಣ್ಣ ಪ್ರೇಮ್‌ಗೆ ಹೇಳಿ ಸೀನ್ ಕಟ್ ಮಾಡಿಸಲಿ . ಸಿನಿಮಾದಲ್ಲಿ ಸುದೀಪ್ ಶಿವಣ್ಣಗೆ ಹೊಡೆಯುವ ಸೀನ್ ಬೇಕಿದ್ದರೆ ತೆಗೆಸಲಿ . ಸಿನಿಮಾದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಪಾತ್ರ ಇರತ್ತೆ. ತಾಯಿಗೆ ಪ್ರಾಮಿಸ್ ಮಾಡಿರ್ತಾರೆ, ಹಾಗಾಗಿ ಶಿವಣ್ಣ ಕೈ ಎತ್ತೋದಿಲ್ಲ. ಅಭಿಮಾನಿಗಳು ಸಿನಿಮಾವನ್ನು ಸಿನಿಮಾವಾಗಿ ನೋಡಲಿ ಎಂದು ಕಿವಿ ಮಾತು ಹೇಳಿದ್ದಾರೆ.

ಇನ್ನು ಮದಕರಿ ಸಿನಿಮಾದ ಬಗ್ಗೆ ಮಾತನಾಡಿದ ಸುದೀಪ್, ಮದಕರಿ ಸಿನಿಮಾ ಅವರು ಮಾಡಲಿ, ನಾನೂ ಮಾಡುತ್ತೇನೆ. ನಾನು ಎರಡು- ಮೂರು ವರ್ಷ ಅಧ್ಯಯನ ಮಾಡಿದ್ದೇನೆ. ಅವರದ್ದು ಜನವರಿಯಲ್ಲಿ ಲಾಂಚ್ ಆಗತ್ತೆ. ನಮ್ಮದು ಮಾರ್ಚ್‌ ಏಪ್ರಿಲ್‌ನಲ್ಲಿ ಲಾಂಚ್ ಆಗತ್ತೆ ಎಂದು ಹೇಳಿದ್ದಾರೆ.

ಅಲ್ಲದೇ ವಾರಿಯರ್ ಒಬ್ಬರ ಚಿತ್ರ ಮಾಡುತ್ತಿದ್ದಾರೆ ನಮಗಿಂತ ಅವರ ಚಿತ್ರ ಚೆನ್ನಾಗಿ ಬರಲಿ ಅವರಿಗೆ ಹಣ ಚೆನ್ನಾಗಿ ಆಗಲಿ. ದುರ್ಗದ ಹುಲಿ ಟೈಟಲ್ ವಿವಾದವಾಗಿದೆ ಅವರು ತೆಗೆದುಕೊಂಡು ಉಳಿದ ಟೈಟಲ್ ಬಿಟ್ಟರೆ ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

Next Story

RELATED STORIES