Top

ಕೇಂದ್ರ ಸಚಿವರ ಸಂಸದರ ನಿಧಿಗೆ ಕನ್ನ ಹಾಕಿದ ಭೂಪ!

ಕೇಂದ್ರ ಸಚಿವರ ಸಂಸದರ ನಿಧಿಗೆ ಕನ್ನ ಹಾಕಿದ ಭೂಪ!
X

ವಂಚನೆ ಯಾರಿಗೆ ಬೇಕಾದರೂ ಮಾಡಬಹುದು. ವಂಚಿಸಲು ದಡ್ಡರೇ ಸಿಗಬೇಕು ಅಂತೇನೂ ಇಲ್ಲ. ಪೊಲೀಸರಾಗಲಿ, ಜನಪ್ರತಿನಿಧಿಗಳೇ ಆಗಲಿ, ಬುದ್ಧಿವಂತರೇ ಆಗಲಿ ಎಲ್ಲರೂ ಒಂದಲ್ಲ ಒಂದು ರೀತಿ ವಂಚನೆಗೆ ಒಳಗಾದವರೇ. ಇತ್ತೀಚೆಗಷ್ಟೇ ಪೊಲೀಸ್ ಡಿಐಜಿ ಅವರನ್ನು ಆನ್​ಲೈನ್ ನಲ್ಲಿ ವಂಚಿಸಿದ್ದನ್ನು ಕೇಳಿದ್ದೀರಿ. ಇದೀಗ ಸಂಸದರ ನಿಧಿಗೆ ಕನ್ನ ಹಾಕಿದ ಘಟನೆ ಬೆಳಕಿಗೆ ಬಂದಿದೆ.

ಹೌದು, ವಿಜಯಪುರ ಲೋಕಸಭೆ ಸದಸ್ಯ , ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡರೂ ಆಗಿರುವ ರಮೇಶ ಜಿಗಜಿಣಗಿ ಅವರ ಲೆಟರ್ ಹೆಡ್ ಬಳಸಿ ಸಂಸದರ ನಿಧಿಯನ್ನೇ ಭೂಪನೊಬ್ಬ ಲಪಟಾಯಿಸಿದ್ದಾನೆ. ತಮಗೆ ಅರಿವಲ್ಲದೇ ಸಂಸದರ ನಿಧಿ ಪಡೆd ವಿಷಯ ತಿಳಿದು ಸ್ವತಃ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಬೆಚ್ಚಿ ಬಿದ್ದಿದ್ದಾರೆ.

ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಯೊಬ್ಬ ಸಂಸದರ ಹೆಸರಿನಲ್ಲಿ ನಕಲಿ ಲೆಟರ್ ಪ್ಯಾಡ್ ಹಾಗೂ ನಕಲಿ ಸಹಿ ಮಾಡಿ ಹಣ ಲಪಟಾಯಿಸಿದ್ದಾನೆ.

ವಿಜಯಪುರ ನಗರದ ಪ್ರತಿಷ್ಠಿತ ಬಂಜಾರಾ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ. ಜಿ. ರಾಠೋಡ ಈ ಕೃತ್ಯ ಎಸಗಿದ್ದು, ಅವರ ವಿರುದ್ಧ ದೂರು ದಾಖಲಾಗಿದೆ. ಅಲ್ಲದೇ ವಿಜಯಪುರ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಯೂ ಇದರಲ್ಲಿ ಶಾಮೀಲಾಗಿರುವ ಶಂಕೆ ಇದೆ.

2016 ರಿಂದ ಈವರೆಗೆ ಸುಮಾರು 6 ಕಾಮಗಾರಿಗಳನ್ನು ಸಚಿವರ ಲೆಟರ್ ಹೆಡ್ ನಲ್ಲಿ ಫೋರ್ಜರಿ ಮಾಡಿ ತನ್ನ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡಿಸಿಕೊಳ್ಳಲಾಗಿದೆ. ಆರೋಪಿ ಕೆ. ಜಿ. ರಾಠೋಡ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ.

Next Story

RELATED STORIES