Top

ಅಬ್ಬಬ್ಬಾ...ಸಾಂಸ್ಕೃತಿಕ ನಗರಿಯಲ್ಲಿ ಸಾರ್ಥಕತೆಯ ಜಂಬೂ ಸವಾರಿ!

ಅಬ್ಬಬ್ಬಾ...ಸಾಂಸ್ಕೃತಿಕ ನಗರಿಯಲ್ಲಿ ಸಾರ್ಥಕತೆಯ ಜಂಬೂ ಸವಾರಿ!
X

ಕೊನೆಯ ಬಾರಿಗೆ ಹೆಜ್ಜೆ ಹಾಕಿದರೂ ಲಯ ತಪ್ಪಲಿಲ್ಲ. ಚಕ್ರವ್ಯೂಹವನ್ನು ಭೇದಿಸುವ ಧೀರನಂತೆ ಅರ್ಜುನ ದಿಟ್ಟ ಹೆಜ್ಜೆ ಇಡುತ್ತಾ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ನಡೆಯುತ್ತಿದ್ದರೆ ಅಭಿಮಾನಿಗಳ ಕಣ್ಣುಗಳಲ್ಲಿ ಮಿಂಚು ಕಾಣುತ್ತಿತ್ತು. ಈ ಅಪೂರ್ವ ದಶ್ಯವನ್ನು ಸಂಭ್ರಮಿಸುವಂತೆ ಕಲಾವಿದರ ತಂಡ ತಾಳಕ್ಕೆ ಹಜ್ಜೆ ಹಾಕುತ್ತಿದ್ದ ನಾಡಹಬ್ಬ ದಸರಾ ಅಬ್ಬಬ್ಬಾ ಅನ್ನುವಂತೆ ಸಂಪನ್ನಗೊಂಡಿತು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜಯದಶಮಿಯ ದಿನವಾದ ಶುಕ್ರವಾರ ಎಲ್ಲರ ಕಣ್ಣು ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೇಲಿತ್ತು.

ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ನಂತರ ಅರಮನೆ ಹೊರಭಾಗದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.

https://www.youtube.com/watch?v=1xywTeCOVp8

12 ಇಲಾಖೆಗಳು, 30 ಜಿಲ್ಲೆಗಳಿಂದ ಈ ಬಾರಿ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು. ಇದರ ಜೊತೆ ಕಂಸಾಸಳೆ, ಕತ್ತಿವರಸೆ, ಕುದುರೆಸವಾರಿ, ಬೊಂಬುಕುಣಿತ, ಜಾನಪದ ನೃತ್ಯಗಾರರು, ವೀರಗಾಸೆ, ಗೊರಕಾನ ನೃತ್ಯ ಸೇರಿದಂತೆ ಸುಮಾರು 40 ಕಲಾ ತಂಡಗಳು ಮೆರವಣಿಗೆಯಲ್ಲಿ ಪ್ರದರ್ಶನ ನೀಡಿ ಗಮನ ಸೆಳೆದರು.

ಜಂಬೂಸವಾರಿ ಪ್ರಮುಖ ಭಾಗವಾದ ಚಾಮುಂಡೇಶ್ವರಿಯನ್ನು ಹೊತ್ತ ಅರ್ಜುನ ಸಾರಥ್ಯದಲ್ಲಿ ಗಜಪಡೆಯ ಪಯಣ ಮನೋಹರವಾಗಿತ್ತು. 7ನೇ ಬಾರಿ ಅಂಬಾರಿಯನ್ನು ಅರ್ಜುನ ಹೊತ್ತು ನಡೆದರೆ, ವರಲಕ್ಷ್ಮೀ, ಧನಂಜಯ, ಕಾವೇರಿ, ಬಲರಾಮ ಮುಂತಾದ ಆನೆಗಳು ಗಾಂಬೀರ್ಯವಾಗಿ ಹೆಜ್ಜೆ ಹಾಕಿದವು.

ಜಂಬೂ ಸವಾರಿ ನೇರವಾಗಿ ವೀಕ್ಷಿಸಲು ಆಗದವರಿಗೆ ನಗರದ 22 ಕಡೆಗಳಲ್ಲಿ ಎಲ್​ಸಿಡಿ ಪರದೆಯನ್ನು ಅಳವಡಿಸಲಾಗಿದೆ. ಕೆ.ಆರ್​. ವೃತ್ತದ ಬಳಿ 4 ಪರದೆಗಳು, ಸಯ್ಯಾಜಿ ರಾವ್ ಮಾರ್ಗ ಮೂಲಕ ಬನ್ನಿಮಂಟಪದವರೆಗೆ 22 ಪರದೆಗಳನ್ನು ಅಳವಡಿಸಲಾಗಿದೆ. ಜಂಬೂ ಸವಾರಿ ಸಾಗುತ್ತಿರುವ ಮಾರ್ಗದಲ್ಲಿ 6 ಕಡೆ ವೀಕ್ಷಕ ವಿವರಣೆ ನೀಡಲಾಗುತ್ತಿದೆ.

Next Story

RELATED STORIES