Top

ವಿಜಯದಶಮಿ ಸಂಭ್ರಮಾಚರಣೆ ವೇಳೆ ರೈಲು ಹರಿದು 50ಕ್ಕೂ ಹೆಚ್ಚು ಸಾವು

ವಿಜಯದಶಮಿ ಸಂಭ್ರಮಾಚರಣೆ ವೇಳೆ ರೈಲು ಹರಿದು 50ಕ್ಕೂ ಹೆಚ್ಚು ಸಾವು
X

ದಸರಾ ಕೊನೆಯ ದಿನವಾದ ವಿಜಯದಶಮಿಯಂದು ರಾವಣನ ಪ್ರತಿಕೃತಿ ದಹಿಸುವ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಜನರ ಮೇಲೆ ರೈಲು ಹರಿದು 50ಕ್ಕೂ ಹೆಚ್ಚು ನಾಗರೀಕರು ಮೃತಪಟ್ಟ ಭೀಕರ ಘಟನೆ ಅಮೃತಸರದಲ್ಲಿ ಸಂಭವಿಸಿದೆ.

ಅಮೃತಸರದ ಜೋಧಾ ಪಾಟಕ್ ನಲ್ಲಿ ರೈಲು ಹಳಿಯ ಮೇಲೆ ನಿಂತು ರಾವಣನ ಪ್ರತಿಕೃತಿ ದಹಿಸುವ ಸಂಭ್ರಮವನ್ನು ನಾಗರೀಕರು ವೀಕ್ಷಿಸುತ್ತಿದ್ದರು. ಪಟಾಕಿ ಸ್ಫೋಟದ ಸದ್ದಿನ ನಡುವೆ ರೈಲು ಬಂದ ಶಬ್ಧ ಕೇಳಲಿಲ್ಲ. ಈ ಹಿನ್ನೆಲೆಯಲ್ಲಿ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ಘಟನಾ ಸ್ಥಳದಲ್ಲಿ 700ಕ್ಕೂ ಹೆಚ್ಚು ಮಂದಿ ಇದ್ದರು ಎಂದು ಹೇಳಲಾಗಿದ್ದು, ಮೃತಪಟ್ಟವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ದಸರಾ ಕಾರ್ಯಕ್ರಮ ಆಯೋಜಿಸಿದ್ದ ಸಂಘಟಕರು ನಿರ್ಲಕ್ಷ್ಯದಿಂದ ಈ ಅನಾಹುತ ಸಂಭವಿಸಿದೆ. ರೈಲು ಬರುವಾಗ ಜನರನ್ನು ಎಚ್ಚರಿಸಲು ಶಬ್ಧ ಮಾಡುವುದು ಅಥವಾ ರೈಲು ನಿಲ್ಲಿಸುವ ಅಥವಾ ವೇಗ ಕಡಿಮೆ ಮಾಡಿಸುವ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಪರಿಹಾರ ರಕ್ಷಣಾ ಪಡೆಯ ಸಿಬ್ಬಂದಿ ದೌಡಾಯಿಸಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.

Next Story

RELATED STORIES