Top

ಶಬರಿಮಲೆ ದೇವರ ಸಮೀಪ ಹೋಗಿದ್ದ ಇಬ್ಬರು ಮಹಿಳೆಯರು!

ಶಬರಿಮಲೆ ದೇವರ ಸಮೀಪ ಹೋಗಿದ್ದ ಇಬ್ಬರು ಮಹಿಳೆಯರು!
X

ಸುಮಾರು 100 ಪೊಲೀಸರ ಸರ್ಪಗಾವಲಿನಲ್ಲಿ ಇಬ್ಬರು ಮಹಿಳೆಯರು ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ಸಮೀಪ ತಲುಪಿದ್ದರು. ಆದರೆ ಭಕ್ತರು ಅವರನ್ನು ತಡೆಯುವ ಮೂಲಕ ಪ್ರವೇಶ ನಿರಾಕರಿಸಿದ್ದಾರೆ.

ಎಲ್ಲಾ ವಯೋಮಾನದ ಮಹಿಳೆಯರು ಶಬರಿಮಲೆ ದೇವಸ್ಥಾನಕ್ಕೆ ತೆರಳಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ಕಳೆದ ಮೂರು ದಿನಗಳಿಂದ ಮಹಿಳಾ ಭಕ್ತರಿಗೆ ದೇವಸ್ಥಾನದ ಪ್ರಮುಖ ಸ್ಥಳವಾದ ಅಯ್ಯಪ್ಪ ದೇವಸ್ಥಾನದ ಬಳಿ ಪ್ರವೇಶ ನೀಡಲು ನಿರಾಕರಿಸಲಾಗುತ್ತಿದೆ.

https://www.youtube.com/watch?v=NF49k3eLofY

ಮಹಿಳಾ ಪತ್ರಕರ್ತೆಯರು ಸೇರಿದಂತೆ ಇಬ್ಬರು ಮಹಿಳೆಯರು ಅಯ್ಯಪ್ಪ ದೇವಸ್ಥಾನದ ಬಳಿ ಅಪಾರ ಭದ್ರತೆಯೊಂದಿಗೆ ತೆರಳಿದ್ದರು. ಅಯ್ಯಪ್ಪ ಸ್ವಾಮಿಯ 18 ಮೆಟ್ಟಿಲು ಹತ್ತಿದರೆ ಇತಿಹಾಸ ನಿರ್ಮಾಣವಾಗುತ್ತಿತ್ತು. ಆದರೆ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಅವರನ್ನು ತಡೆಗಟ್ಟಲಾಯಿತು.

ಹೈದರಾಬಾದ್​ನ ಮೋಜೊ ಪತ್ರಕರ್ತೆ ಕವಿತಾ ಜಕ್ಕಲ್ ಸಂಪ್ರದಾಯದಂತೆ ಕಪ್ಪು ವಸ್ತ್ರ ಧರಿಸಿ ಇರುಮುಡಿ ಕಟ್ಟು ತಲೆಯ ಮೇಲೆ ಹೊತ್ತಿದ್ದರು. ಸುಮಾರು 100 ಪೊಲೀಸರು ಮಧ್ಯೆ ಹೆಲ್ಮೆಟ್ ಮತ್ತು ಪೊಲೀಸ್ ಭದ್ರತಾ ಧಿರಿಸು ಮೇಲೆ ಧರಿಸಿ ಸಾಗಿದ್ದರು. ಆದರೆ ಗರ್ಭಗುಡಿ ಸಮೀಪ ಬರುತ್ತಿದ್ದಂತೆ ಭಕ್ತರು ಅವರನ್ನು ತಡೆದರು.

Next Story

RELATED STORIES