Top

ರೈತರ ಬ್ಯಾಂಕ್ ಖಾತೆಗೆ ದಿಢೀರ್ ಬಂತು ಲಕ್ಷಾಂತರ ರೂ.!

ರೈತರ ಬ್ಯಾಂಕ್ ಖಾತೆಗೆ ದಿಢೀರ್ ಬಂತು ಲಕ್ಷಾಂತರ ರೂ.!
X

ಸಾಲದ ಶೂಲದಿಂದ ತತ್ತರಿಸುತ್ತಿರುವ ರೈತರ ಸಾಲಮನ್ನಾ ಬಗ್ಗೆ ರಾಜ್ಯ ಸರಕಾರ ಹೇಳುತ್ತಿದೆ. ಆದರೆ ರೈತರ ಬ್ಯಾಂಕ್ ಖಾತೆಗಳಲ್ಲಿ ಏಕಾಏಕಿ ಲಕ್ಷಾಂತರ ರೂ. ಬಂದು ಬಿದ್ದರೆ ಆ ರೈತನ ಸ್ಥಿತಿ ಹೇಗಿರಬೇಡ..?

ಹೌದು, ರಾಯಚೂರಿನಲ್ಲಿ ಇಂತಹದ್ದೊಂದು ಆಕಸ್ಮಿಕ ನಡೆದಿದ್ದು, ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಒಬ್ಬೊಬ್ಬರ ಖಾತೆಯಲ್ಲಿ ಸುಮಾರು ಒಂದು ಲಕ್ಷದಂತೆ ಸುಮಾರು 1 ಕೋಟಿವರೆಗೂ ಹಣ ಜಮೆಯಾಗಿದೆ.

ನಗರದ ಪ್ರಗತಿ ಕೃಷ್ಣಾ ಬ್ಯಾಂಕ್​ನಿಂದ ಒಂದೇ ದಿನ 1 ಕೋಟಿಗೂ ಅಧಿಕ ಮೊತ್ತ ರೈತರ ಖಾತೆಗೆ ಜಮೆಯಾಗಿದೆ. ಹಣ ಸಂದಾಯವಾದ ಬಗ್ಗೆ ರೈತರಲ್ಲಿ ಗೊಂದಲ ಉಂಟಾಗಿದ್ದು, ಯಾವ ಹಣ? ಆಕಸ್ಮಿಕವಾದರೆ ಬಂದ ಹಣ ವಾಪಸ್ ಹೋಗುವುದೇ ಎಂಬ ಗೊಂದಲಕ್ಕೆ ಬಿದ್ದಿದ್ದಾರೆ.

ರಾಯಚೂರು ತಾಲೂಕಿನ ಗಾಣದಾಳ ಗ್ರಾಮದ ಶಾಖೆಯ ಸುಮಾರು 90 ಕೋಟಿ ರೂ. ರೈತರ ಖಾತೆಗೆ ಹಣ ಜಮೆಯಾಗಿದೆ. ಗಾಣದಾಳ, ಚಿಕ್ಕಮಂಚಾಲಿ ಮತ್ತು ಬುಳ್ಳಾಪುರ ಗ್ರಾಮದ ರೈತರ ಖಾತೆಗೆ ಹಣ ಜಮೆಯಾಗಿದ್ದು, ರೈತರ ಖಾತೆಗೆ ಜಮೆಯಾದ ಹಣ ಯಾವುದು ಎಂಬುದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.

ಗಾಣದಾಳ ಶಾಖೆಯ ವ್ಯವಸ್ಥಾಪಕರಿಗೆ ಹಣ ಸಂದಾಯವಾದ ಬಗ್ಗೆ ಮಾಹಿತಿ ಇಲ್ಲ. ಜಮೆಯಾದ ಹಣ ಬೆಳೆವಿಮೆನಾ, ತೊಗರಿ ಮಾರಿದ ಹಣವಾ ಅಥವಾ ಬೆಳೆ ನಷ್ಟ ಪರಿಹಾದ ಹಣವಾ ಎಂಬ ಗೊಂದಲ ಸೃಷ್ಟಿಯಾಗಿದೆ.

ಪ್ರತೀ ರೈತನ ಖಾತೆಗೆ 1 ರಿಂದ 3.80 ಲಕ್ಷದವರೆಗೆ ಬ್ಯಾಂಕ್ ವತಿಯಿಂದ ಸಂದಾಯ ಮಾಡಲಾಗಿದೆ. 90 ಜನರಲ್ಲಿ ಕೆಲ ಜನರಿಗೆ ಭೂಮಿಯೇ ಇಲ್ಲ. ಅಂತಹವರಿಗೂ ಹಣ ಸಂದಾಯ ಆಗಿರುವುದು ಅಚ್ಚರಿ ಮೂಡಿಸಿದೆ. ಇದೀಗ ಪಿಕೆಜಿಬಿ ಬ್ಯಾಂಕ್ ಅಧಿಕಾರಿಗಳು ಖಾತೆಗೆ ಜಮೆಯಾದ ಹಣದಲ್ಲಿ ಸಾಲ ಮರು ಪಾವತಿಸಿಕೊಳ್ಳುತ್ತಿದ್ದಾರೆ.

Next Story

RELATED STORIES