Top

ಡಿಜಿಪಿಗೆ ಆನ್​ಲೈನ್​ನಲ್ಲಿ ಪಂಗನಾಮ ಹಾಕಿದ ಖದೀಮರು!

ಡಿಜಿಪಿಗೆ ಆನ್​ಲೈನ್​ನಲ್ಲಿ ಪಂಗನಾಮ ಹಾಕಿದ ಖದೀಮರು!
X

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗೆ ಖದೀಮರು ವಂಚಿಸಿದ ಘಟನೆ ನಡೆದಿದೆ. ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎಎಂ ಪ್ರಸಾದ್‌ಗೆ ಆನ್‌ಲೈನ್ ವಂಚನೆ ಮಾಡಿದ್ದಾರೆ.

ಖದೀಮರು ಎಎಂ ಪ್ರಸಾದ್ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದು, ಎರಡು ಪ್ರತ್ಯೇಕ ಖಾತೆಗಳಿಗೆ ತಲಾ ಒಂದೊಂದು ಲಕ್ಷ ಅಂದರೆ ಒಟ್ಟು ಎರಡು ಲಕ್ಷ ರೂ. ಕದ್ದಿದ್ದಾರೆ.

ಕಳೆದ ಸೋಮವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಅಪರಿಚಿತನೊಬ್ಬ ಪ್ರಸಾದ್‌ಗೆ ಕರೆ ಮಾಡಿ, ನಿಮ್ಮ ಡೆಬಿಟ್ ಕಾರ್ಡ್ ಅವಧಿ ಮುಗಿದಿದೆ. ರಿ ಆ್ಯಕ್ಟಿವ್ ಮಾಡಬೇಕು ಎಂದು ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾನೆ.

ಬಳಿಕ ಕೆಲವೇ ಕ್ಷಣಗಳಲ್ಲಿ ಮತ್ತೊಮ್ಮೆ ಕರೆ ಮಾಡಿ ಪ್ರಸಾದ್‌ರ ಇನ್ನೊಂದು ಬ್ಯಾಂಕ್ ಖಾತೆಯ ಮಾಹಿತಿಯನ್ನೂ ಪಡೆದಿದ್ದಾನೆ. ಇದಾಗಿ ಒಂದು ಗಂಟೆಯಲ್ಲಿ ಎರಡೂ ಬ್ಯಾಂಕ್‌ನಲ್ಲಿದ್ದ ತಲಾ ಒಂದೊಂದು ಲಕ್ಷ ರೂಪಾಯಿ ಹಣ ಡೆಬಿಟ್ ಆಗಿರುವ ಮೆಸೆಜ್ ಬಂದಿದೆ.

ಇನ್ನು ಪೊಲೀಸರಿಗೆ ವಂಚನೆ ಮಾಡಿರುವುದು ಇದೇ ಮೊದಲೇನಲ್ಲ. 2015ರಲ್ಲಿ ಡಿಜಿಪಿ ಓಂ ಪ್ರಕಾಶ್ ಆನ್ಲೈನ್ ವಂಚಕರಿಂದ 10 ಸಾವಿರ ರೂ. ಕಳೆದುಕೊಂಡಿದ್ದರು.

ಚೆನ್ನೈನಲ್ಲಿ ಕುಳಿತು ಅಶ್ರಫ್ ಅಲಿ ಎಂಬಾತ ಓಂ ಪ್ರಕಾಶ್‌ಗೆ ವಂಚಿಸಿದ್ದ. ಬಳಿಕ ಕಾರ್ಯಾಚರಣೆ ನಡೆಸಿ ದೆಹಲಿ ಮೂಲಕ ಅಶ್ರಫ್ ಅಲಿ ಎಂಬಾತನನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದರು.

Next Story

RELATED STORIES