Top

ಅಕ್ಕವ್ರನ್ನ ಯಡಿಯೂರಪ್ಪ ಪಾರ್ಲಿಮೆಂಟ್​ಗೆ ಕಳಿಸಲಿ: ಡಿಕೆಶಿ ವ್ಯಂಗ್ಯ

ಅಕ್ಕವ್ರನ್ನ ಯಡಿಯೂರಪ್ಪ ಪಾರ್ಲಿಮೆಂಟ್​ಗೆ ಕಳಿಸಲಿ: ಡಿಕೆಶಿ ವ್ಯಂಗ್ಯ
X

ಗದಗ: ಯಡಿಯೂರಪ್ಪನವರು ಅಕ್ಕವ್ರನ್ನ ಪಾರ್ಲಿಮೆಂಟ್​ಗೆ ಕಳಿಸಲಿ, ನನ್ನ ಜೈಲಿಗೆ ಕಳಸಲಿ. ಇನ್ನು ಶ್ರೀರಾಮಲು ಅವರು ಜಡ್ಜ್ ಆಗಿ ಅಪಾಯಿಂಟ್ ಆಗಿದ್ದಾರೆ. ಹೀಗಾಗಿ ನನ್ನನ್ನು ಜೈಲಿಗೆ ಕಳಿಸೋ ವಿಚಾರ ಮಾತಾಡ್ತಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್,​ ಶ್ರೀರಾಮುಲು ಮತ್ತು ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣಕ್ಕೆ ಆಗಮಿಸಿದ್ದ ಡಿಕೆಶಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಶ್ರೀರಾಮಲು ಮತ್ತು ಯಡಿಯೂರಪ್ಪ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾವು ಎರಡು ಕ್ಷೇತ್ರದಲ್ಲಿ ಗೆಲವು ಸಾಧಿಸಲಿದ್ದೇವೆ ಎಂದು ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಯಡಿಯೂರಪ್ಪ ಒಂದಲ್ಲಾ ಎರಡಲ್ಲಾ ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಲಿ. ನಮಗೆ ಯಾವುದೇ ಬೇಜಾರಿಲ್ಲಾ. ಅಕ್ಕವರನ್ನ ಸಂಸತ್​ಗೆ ಕಳಿಸಿ, ನನ್ನ ಜೈಲಿಗೆ ಕಳಿಸಲಿ ಎಂದು ಡಿಕೆಶಿ ಹೇಳಿದರು.

ಅಲ್ಲದೇ ಶ್ರೀರಾಮಲು ಈಗಾಗಲೇ ಜಡ್ಜ್ ಆಗಿ ನೇಮಕ ಹೊಂದಿದ್ದಾರೆ. ಕೇಂದ್ರ ಸರ್ಕಾರ, ನ್ಯಾಯಾಂಗ ಅವರ ಕೈಯಲ್ಲಿ ಇದೆ ಅಂದಂಗಾಯ್ತು. ಒಬ್ಬ ಮಂತ್ರಿ ಇದ್ದವರು ನನ್ನ ಜೈಲಿಗೆ ಕಳಿಸ್ತೀನಿ ಅಂತ ಮಾತಾಡ್ತಾರೆ ಅಂದ್ರೆ ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದರ್ಥ ಎಂದು ಡಿಕೆಶಿ ಬಣ್ಣಿಸಿದರು.

ಬಳ್ಳಾರಿಯಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ನಡೆದ ಆಡಳಿತದಲ್ಲಿ ಬಳ್ಳಾರಿ ಸ್ಥಬ್ಧ ಆಗಿದೆ. ಹೀಗಾಗಿ ಅಲ್ಲಿಯ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಾಗಿದೆ. ಹೀಗಾಗಿ ಉಗ್ರಪ್ಪ ಅವರನ್ನು ಚುನಾವಣೆಗೆ ನಿಲ್ಲಿಸಿ ಬಳ್ಳಾರಿ ಜನರಿಗೆ ನೆಮ್ಮದಿ ಜೀವನ ಕೊಡಬೇಕಾಗಿದೆ ಎಂದ ಡಿಕೆಶಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ದುರಾಡಳಿತಕ್ಕೆ ಅವಕಾಶ ಕೊಡಲಿಲ್ಲ. ಬಳ್ಳಾರಿಯಲ್ಲಿ ಬಿಜೆಪಿ ಜೊತೆಗೆ ಗುರುತಿಸಿಕೊಂಡ ಶಾಸಕರು ನಮ್ಮ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಹೀಗಾಗಿ ನಾವು ಅಲ್ಲಿ 6 ಕ್ಷೇತ್ರವನ್ನು ಗೆದ್ದಿದೇವೆ ಎಂದರು.

Next Story

RELATED STORIES