Top

ಅಪಾಯದಲ್ಲಿ 50 ಕೋಟಿ ಮೊಬೈಲ್ ಸಂಖ್ಯೆ?

ಅಪಾಯದಲ್ಲಿ 50 ಕೋಟಿ ಮೊಬೈಲ್ ಸಂಖ್ಯೆ?
X

ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಆಧಾರ್ ಸಂಖ್ಯೆಯೊಂದಿಗೆ ಮೊಬೈಲ್ ಸಿಮ್ ಕಾರ್ಡ್ ಪಡೆದಿದ್ದ ಸುಮಾರು 50 ಕೋಟಿ ಗ್ರಾಹಕರು ಈಗ ಮೊಬೈಲ್ ನಂಬರ್ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಖಾಸಗಿ ಕಂಪನಿಗಳು ಮೊಬೈಲ್ ನಂಬರ್ ನೀಡಲು ಆಧಾರ್ ಸಂಖ್ಯೆ ಪಡೆಯುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇವಲ ಆಧಾರ್ ಕಾರ್ಡ್ ಸಂಖ್ಯೆಯನ್ನೇ ಆಧಾರವಾಗಿ ಪಡೆದು ಸಿಮ್ ಕಾರ್ಡ್​ ನೀಡಲಾಗಿತ್ತು.

ಇದೀಗ ಆ ಸಂಖ್ಯೆಗಳಿಗೆ ಪರ್ಯಾಯ ಗುರುತು ಚೀಟಿ ಪಡೆಯಬೇಕಾಗಿದೆ. ಇಲ್ಲವಾದರೆ ಆ ಮೊಬೈಲ್ ಸಂಖ್ಯೆ ಮಾನ್ಯತೆ ಕಳೆದುಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಪರ್ಯಾಯ ಗುರುತು ಪತ್ರ ಪಡೆಯದೇ ಇದ್ದರೆ ಸುಮಾರು 50 ಕೋಟಿ ಮೊಬೈಲ್ ಸಂಖ್ಯೆಗಳು ಮಾನ್ಯತೆ ಕಳೆದುಕೊಳ್ಳಲಿದೆ.

ಸಾಮಾನ್ಯವಾಗಿ ಸಿಮ್ ಕಾರ್ಡ್ ಆ್ಯಕ್ಟಿವೇಟ್ ಮಾಡುವ ಮುನ್ನ ಕಂಪನಿಗಳು ಕೆವೈಸಿ (ನೋ ಯುವರ್ ಕಸ್ಟಮರ್ ಅಂದರೆ ನಿಮ್ಮ ಗ್ರಾಹಕರು ಗೊತ್ತು) ಎಂಬ ಅಂಶವನ್ನು ನಮೂದಿಸಬೇಕು. ಇದಕ್ಕಾಗಿ ಆಧಾರ್ ಕಾರ್ಡ್ ಸಂಖ್ಯೆಯನ್ನೇ ಗುರುತು ಪತ್ರವಾಗಿ ಬಳಸಲಾಗುತ್ತಿತ್ತು. ಇದೀಗ ಆಧಾರ್ ಕಾರ್ಡ್ ಗುರುತು ಹೊರಟು ಹೋದರೆ ತಾಂತ್ರಿಕ ಸಮಸ್ಯೆ ಉಂಟಾಗಿ ಸಂಖ್ಯೆಗಳು ಮಾನ್ಯತೆ ಪಡೆಯುವ ಸಾಧ್ಯತೆ ಇದೆ.

Next Story

RELATED STORIES