ವಿರಾಟ್ ಜೊತೆ ಅನುಷ್ಕಾ ವಿದೇಶೀ ಪ್ರವಾಸಕ್ಕೆ ಬಿಸಿಸಿಐ ಒಪ್ಪಿಗೆ

X
TV5 Kannada17 Oct 2018 11:32 AM GMT
ವಿದೇಶೀ ಪ್ರವಾಸದ ವೇಳೆ ತನ್ನ ಜೊತೆ ಪತ್ನಿ ಅನುಷ್ಕಾ ಶರ್ಮ ಕೂಡ ಬರಲು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಮನವಿಗೆ ಬಿಸಿಸಿಐ ಒಪ್ಪಿಗೆ ನೀಡಿದೆ.
ಅಂತಾರಾಷ್ಟ್ರೀಯ ಪ್ರವಾಸದ ವೇಳೆ ಆಟಗಾರರು ಪತ್ನಿಯರ ಜೊತೆ ಹೆಚ್ಚು ಸಮಯ ಕಳೆಯಲು ಎಂಬ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೋರಿಕೆಗೆ ಬಿಸಿಸಿಐ ಒಪ್ಪಿಗೆ ನೀಡಿದೆ.
ವಿದೇಶೀ ಪ್ರವಾಸದ ವೇಳೆ ಆಟಗಾರರು ತಮ್ಮ ಗೆಳತಿಯರು ಹಾಗೂ ಪತ್ನಿಯರ ಜೊತೆ ಹೆಚ್ಚು ಸಮಯ ಕಳೆಯಲು ವಿರಾಟ್ ಕೊಹ್ಲಿ ಬಿಸಿಸಿಐಗೆ ಮನವಿ ಮಾಡಿದ್ದರು.
ವಿದೇಶೀ ಪ್ರವಾಸದ ಆರಂಭವಾದ 10 ದಿನಗಳ ನಂತರ ಆಟಗಾರರು ತಮ್ಮ ಪತ್ನಿ ಹಾಗೂ ಗೆಳತಿಯರ ಜೊತೆ ಕಳೆಯಬಹುದು ಎಂದು ಬಿಸಿಸಿಐ ಷರತ್ತಿನೊಂದಿಗೆ ಅನುಮತಿ ನೀಡಿದೆ.
ಈ ಹಿಂದೆ ಭಾರತೀಯ ಆಟಗಾರರು 45ದಿನಕ್ಕಿಂತ ಹೆಚ್ಚು ಅವಧಿಯ ವಿದೇಶೀ ಪ್ರವಾಸ ಕೈಗೊಂಡರೆ ಪ್ರವಾಸ ಆರಂಭಗೊಂಡ 14 ದಿನಗಳ ನಂತರ ಎರಡು ವಾರಗಳಷ್ಟೇ ಸಂಗಾತಿ ಜೊತೆ ಕಳೆಯಲು ಅವಕಾಶ ನೀಡಲಾಗಿತ್ತು.
Next Story