Top

#metooಗೆ ಮೊದಲ ಬಲಿ: ಸಚಿವ ಸ್ಥಾನಕ್ಕೆ ಅಕ್ಬರ್ ರಾಜೀನಾಮೆ

ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ಸ್ಥಾನಕ್ಕೆ ಎಂ.ಜೆ. ಅಕ್ಬರ್ ಕೊನೆಗೂ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಕೇಂದ್ರ ಸರಕಾರದ ಮೊದಲ ವಿಕೆಟ್ ಪತನಗೊಂಡಂತಾಗಿದೆ.

ದಿ ಏಷ್ಯನ್ ಏಜ್ ಆಂಗ್ಲದಿನ ಪತ್ರಿಕೆಯ ಸಂಪಾದಕರಾಗಿದ್ದ ಎಂ.ಜೆ. ಅಕ್ಬರ್​ ವಿರುದ್ಧ ಸುಮಾರು 15 ಪತ್ರಕರ್ತೆಯರು ಮೀಟೂ ಅಭಿಯಾನದಡಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಈ ಆರೋಪಗಳಿಗೆ ಸುಮಾರು 20 ಸಹದ್ಯೋಗಿಗಳು ಬೆಂಬಲ ವ್ಯಕ್ತಪಡಿಸಿದ್ದರು.

ಕಳೆದ ಒಂದು ವಾರದಿಂದ ರಾಜೀನಾಮೆಗೆ ಒತ್ತಡ ಕೇಳಿ ಬಂದಿದ್ದರೂ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿ ರಾಜೀನಾಮೆ ನೀಡಲು ನಿರಾಕರಿಸಿದ್ದ ಅಕ್ಬರ್, ಬುಧವಾರ ರಾಜೀನಾಮೆ ನೀಡಿದರು.

ಅಕ್ಟೋಬರ್ 18ರಂದು ವಿಚಾರಣೆ ಆರಂಭಗೊಳ್ಳಲಿದ್ದು, ಒಂದು ದಿನ ಮುಂಚಿತವಾಗಿ ರಾಜೀನಾಮೆ ನೀಡಿದ ಅಕ್ಬರ್​, ನನ್ನ ಮೇಲೆ ವೈಯಕ್ತಿಕ ಆರೋಪ ಮಾಡಲಾಗುತ್ತಿದೆ. ನ್ಯಾಯಾಲಯದಲ್ಲಿ ವೈಯಕ್ತಿಕವಾಗಿಯೇ ಹೋರಾಟ ಮುಂದುವರಿಯಲು ಬಯಸಿದ್ದೇನೆ. ಈ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದಾರೆ.

Next Story

RELATED STORIES