Top

ಶೋಭಾ ಹಾವಿನ ವಂಶದವರೇ?: ಸಿದ್ದರಾಮಯ್ಯ ತಿರುಗೇಟು

ಶೋಭಾ ಹಾವಿನ ವಂಶದವರೇ?: ಸಿದ್ದರಾಮಯ್ಯ ತಿರುಗೇಟು
X

ಆಯಮ್ಮ ಹಾವಿನ ಕುಟುಂಬಕ್ಕೆ ಸೇರಿದವರೇನೋ ಗೊತ್ತಿಲ್ಲ. ನಾನಂತೂ ಹಾವಲ್ಲ. ಆ ಯಮ್ಮಾ ಹಾವೋ, ಮನುಷ್ಯಳೋ ಎಂದು ನನಗೇನು ಗೊತ್ತು? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಈಗ ಹಲ್ಲಿಲ್ಲದ ಹಾವಾಗಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಬಾಗಲಕೋಟೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಶೋಭಾಗೆ ಕಾಮನ್​ಸೆನ್ಸ್ ಅನ್ನೋದೇ ಇಲ್ಲ ಎಂದರು.

ಆಯಮ್ಮನಿಗೆ ಜವಾಬ್ದಾರಿ ಇದೆಯೋ ಇಲ್ಲವೋ ಗೊತ್ತಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹಾವಿನ ವಿಷಯ ನನಗೆ ಗೊತ್ತಿಲ್ಲ. ನಾನು ಮನುಷ್ಯ. ಹಾವಂತೂ ಅಲ್ಲ. ಆಯಮ್ಮಾ ಹಾವಿನ ಕುಟುಂಬದವರೋ ಅಥವಾ ಮನುಷ್ಯ ಜಾತಿಗೆ ಸೇರಿದವರೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ನುಡಿದರು.

ಹಾವಿಗೆ ಹಲ್ಲು ಇರಲಿ, ಇಲ್ಲದೇ ಇರಲಿ ಹಾವಿಗೆ ಹಾಲು ಎರಯಲೇಬೇಕು. ಹಲ್ಲಿಗೂ ಹಾವಿಗೂ ಏನು ಸಂಬಂಧ? ಹಲ್ಲಿರುವುದೇ ಅಗೆಯುವುದಕ್ಕೊಸ್ಕರ. ಹಾಲು ಕುಡಿಯೋಕೆ ಹಲ್ಲು ಬೇಕಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇದೇ ವೇಳೆ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಯಡಿಯೂರಪ್ಪ ಸುಳ್ಳು ಹೇಳೋದು ಹೊಸತೇನಲ್ಲ. ಅವರಿಗೆ ಸತ್ಯ ಹೇಳಿಯೇ ಗೊತ್ತಿಲ್ಲ. ಯಾವಾಗಲೂ ಸುಳ್ಳು ಹೇಳುತ್ತಿದ್ದರೂ ಅವರನ್ನು ಮಾಧ್ಯಮದವರು ಇನ್ನೂ ನಂಬಿಕೊಂಡಿದ್ದಿರಲ್ಲಾ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಯಡಿಯೂರಪ್ಪ ಬಳಿ ಯಾವುದೇ ಬಾಂಬ್ ಇಲ್ಲ. ಇನ್ನು ಹುಸಿ ಬಾಂಬ್ ಎಲ್ಲಿಂದ ಬಂತು? ನೋ ಬಾಂಬ್ ಅಟ್ ಆಲ್ ಎಂದು ತಮ್ಮದೇ ಶೈಲಿಯಲ್ಲಿ ಸಿದ್ದರಾಮಯ್ಯ ಹೇಳಿದರು.

Next Story

RELATED STORIES