Top

ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತೀರ್ಥೋದ್ಭವ: ಸಾಕ್ಷಿಯಾದ ಸಿಎಂ ಕುಮಾರಸ್ವಾಮಿ

ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತೀರ್ಥೋದ್ಭವ: ಸಾಕ್ಷಿಯಾದ ಸಿಎಂ ಕುಮಾರಸ್ವಾಮಿ
X

ನಿರೀಕ್ಷೆಯಂತೆ ಕೊಡಗಿನ ಭಾಗಮಂಡಲದ ಬ್ರಹ್ಮಕುಂಡಿಕೆಯ ಮೇಷ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಿದೆ. ಈ ಬಾರಿಯ ವಿಶೇಷ ಅಂದರೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸ್ವತಃ ಈ ಪವಿತ್ರ ಘಟನೆಗೆ ಸಾಕ್ಷಿಯಾದರು.

ದಕ್ಷಿಣ ಭಾರತ ಗಂಗಾನದಿ ಎಂದೇ ಖ್ಯಾತಿ ಪಡೆದ ಕಾವೇರಿ ಬುಧವಾರ ಸಂಜೆ 6.43 ನಿಮಿಷಕ್ಕೆ ತೀರ್ಥೋದ್ಭವವಾಯಿತು.

ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ತೀರ್ಥೋದ್ಭವಕ್ಕೆ ಕೆಲವೇ ನಿಮಿಷಗಳಿರುವಾಗ ಆಗಮಿಸಿದರು. ಇದೇ ವೇಳೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.

ಭಕ್ತಾಧಿಗಳ ಉದ್ಘೋಷದ ನಡುವೆ ತೀರ್ಥರೂಪಿಣಿ ಪ್ರತ್ಯಕ್ಷವಾಗಿದ್ದು, ಕಾವೇರಿ ಮೂಲದಲ್ಲೇ ಸಂಭ್ರಮ ಮನೆ ಮಾಡಿದ್ದು, ದೇಶದ ವಿವಿದೆಡೆಗಳಿಂದ ಆಗಮಿಸಿದ ಭಕ್ತರ ದಂಡು ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡರು.

ಈ ಬಾರಿ ಕೊಡಗು ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಆದರೂ ಪ್ರತಿ ವರ್ಷದಂತೆ ಈ ಬಾರಿಯೂ ನಿಗದಿತ ವೇಳೆಗೆ ಕಾವೇರಿ ತೀರ್ಥೋದ್ಭವ ಆಗಿದ್ದು ಅಚ್ಚರಿಗಳಲ್ಲಿ ಒಂದು.

Next Story

RELATED STORIES