ಕೇಂದ್ರ ಸಚಿವ ಅಕ್ಬರ್ ವಿರುದ್ಧ 15ನೇ ದೂರು: 20 ಪತ್ರಕರ್ತೆಯರ ಬೆಂಬಲ

ಕೇಂದ್ರ ವಿದೇಶಾಂಗ ರಾಜ್ಯ ಸಚಿವ ಎ.ಜೆ. ಅಕ್ಬರ್ ವಿರುದ್ಧ ಮೀಟೂ ಅಭಿಯಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಚಿವರ ವಿರುದ್ಧ ಮೊದಲ ಬಾರಿ ಧ್ವನಿ ಎತ್ತಿದ ಪ್ರಿಯ ರಮಾಮಣಿ ಪರ 20 ಪತ್ರಕರ್ತೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅಕ್ಬರ್ ವಿರುದ್ಧ ಲೈಂಗಿಕ ಶೋಷಣೆ ಕುರಿತು 15ನೇ ಆರೋಪ ಕೇಳಿ ಬಂದಿದೆ.
ದಿ ಏಷ್ಯನ್ ಏಜ್ ಆಂಗ್ಲ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುವ ವೇಳೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪತ್ರಕರ್ತೆ ಪ್ರಿಯ ರಮಾಮಣಿ ಮಾಡಿದ ಆರೋಪವನ್ನು ಸಹದ್ಯೋಗಿಗಳು ಬೆಂಬಲ ವ್ಯಕ್ತಪಡಿಸಿ ಜಂಟಿ ಹೇಳಿಕೆ ನೀಡಿದ್ದಾರೆ.
ಹಾಲಿ ಸಚಿವರಾಗಿರುವ ಅಕ್ಬರ್ ಅವರ ಲೈಂಗಿಕ ದೌರ್ಜನಕ್ಕೆ ಕೆಲವು ಸಹದ್ಯಗೋಗಿಗಳು ಒಳಗಾಗಿದ್ದಾರೆ. ಇದಕ್ಕೆ ಇನ್ನೂ ಕೆಲವರು ಸಾಕ್ಷಿಯಾಗಿದ್ದಾರೆ ಎಂದು 20 ಪತ್ರಕರ್ತೆಯರು ಆರೋಪಿಸಿದ್ದಾರೆ.
ಈ ಹೋರಾಟದಲ್ಲಿ ರಮಾಮಣಿ ಏಕಾಂಗಿಯಲ್ಲ. ಅವರೊಂದಿಗೆ ನಾವಿದ್ದೇವೆ. ಮಾನನಷ್ಟ ಮೊಕದ್ದಮೆ ವಿಚಾರಣೆ ವೇಳೆ ನ್ಯಾಯಾಲಯ ನಮ್ಮ ಅಭಿಪ್ರಾಯವನ್ನೂ ಪಡೆಯಬೇಕು ಎಂದು ಪತ್ರಕರ್ತೆಯರು ಆಗ್ರಹಿಸಿದ್ದಾರೆ.
ಇದೇ ವೇಳೆ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ 14 ಆರೋಪಗಳು ಕೇಳಿ ಬಂದಿದ್ದವು. ಇದೀಗ ಮತ್ತೊಬ್ಬ ಪತ್ರಕರ್ತೆ ಕೂಡ ಅಕ್ಬರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
15 ವರ್ಷಗಳ ಹಿಂದೆ ಏಷ್ಯನ್ ಏಜ್ ಪತ್ರಿಕೆ ಆರಂಭವಾದಾಗ ಅಕ್ಬರ್ ಸಂಪಾದಕರಾಗಿದ್ದರು. ಆಗ ಎರಡು ಬಾರಿ ಬಲವಂತವಾಗಿ ನನಗೆ ಮುತ್ತುಕೊಟ್ಟರು. ಒಂದು ಬಾರಿ ಕೊಠಡಿಗೆ ಆಹ್ವಾನಿಸಿದ್ದರು ಎಂದು ಹೋದಾಗ ಅಂಡರ್ ವೇರ್ ನಲ್ಲಿಯೇ ಸ್ವಾಗತಿಸಿದರು ಎಂದು ಟುಶಿಷ್ಟಾ ಪಟೇಲ್ ಆರೋಪಿಸಿದರು.
ಕೊಠಡಿಗೆ ಆಹ್ವಾನಿಸಿದ್ದಾರೆಂದು ಸಹದ್ಯೋಗಿಗಳ ಜೊತೆ ಹೋಗಿ ಬಾಗಿಲು ತಟ್ಟಿದೆ. ಒಳಗಿನಿಂದ ಬಾಗಿಲು ತೆರೆದಿದೆ. ಆದರೆ ಅಂಡರ್ ವೇರ್ ಮಾತ್ರ ಧರಿಸಿ ಬರುವುದಿದ್ದರೆ ಬಾ ಎಂದು ಆಹ್ವಾನಿಸಿದರು. ಇದರಿಂದ ಮುಜುಗರವಾಗಿ ಮರಳಿದೆ ಎಂದು ಪತ್ರಕರ್ತೆ ಆರೋಪಿಸಿದ್ದಾರೆ.
ಕೆಲಸದ ನಿಮಿತ್ತ ಮತ್ತೊಮ್ಮೆ ಕೊಠಡಿಗೆ ಆಹ್ವಾನಿಸಿದರು. ಮಾತನಾಡುತ್ತಿದ್ದಾಗ ಇದ್ದಕ್ಕಿಂತ ನನ್ನ ಬಳಿ ಬಂದು ಮುತ್ತು ಕೊಟ್ಟರು. ಆಘಾತಕ್ಕೆ ಒಳಗಾದ ನಾನು ಕೂಡಲೇ ಓಡಿ ರಸ್ತೆ ಬಂದು ಕೂಡಲೇ ಆಟೋ ಹತ್ತಿ ಮನೆಗೆ ಮರಳಿದೆ ಎಂದು ಘಟನೆಯನ್ನು ವಿವರಿಸಿದ್ದಾರೆ.