Top

ಆತ್ಮಹತ್ಯೆಗೂ ಮುನ್ನಾ ಯುವಕ ಬರೆದ ಪತ್ರದಲ್ಲಿ ಏನಿತ್ತು ಗೊತ್ತಾ?

ಆತ್ಮಹತ್ಯೆಗೂ ಮುನ್ನಾ ಯುವಕ ಬರೆದ ಪತ್ರದಲ್ಲಿ ಏನಿತ್ತು ಗೊತ್ತಾ?
X

ಆತ್ಮಹತ್ಯೆಗೆ ಮುನ್ನಾ ಅವರು ಕಾರಣ, ಇವರು ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆತ್ಯಹತ್ಯೆ ಪತ್ರ ಬರೆದಿಟ್ಟು ಶರಣಾಗುವವರನ್ನು ನೋಡಿದ್ದೀರಿ. ಅವರು ಬರೆದ ಡೆತ್‌ ನೋಟ್‌ ಓದಿದ್ದೀರಿ.

ಆದರೇ ಇಲ್ಲೊಬ್ಬ ಯುವಕ ಅದಕ್ಕೆ ತದ್ವಿರುದ್ಧವಾಗುವಂತ ಡೆತ್‌ ನೋಟ್ ಬರೆದಿತ್ತು ಆತ್ಮಹತ್ಯೆಗೆ ಶರಣಾದ ಘಟನೆ, ಉಡುಪಿಯ ಕೋಟೇಶ್ವರದ ಕುಂದಾಪುರ ಮಾರ್ಕೋಡುವಿನ ಬಬ್ಬರಿಮಕ್ಕಿಯಲ್ಲಿ ನಡೆದಿದೆ.

ಅಂದಹಾಗೇ, ಉಡುಪಿಯ ರಿಲಯನ್ಸ್‌ ಫೌಂಡೇಷನ್‌ನ ಕೃಷಿ ವಿಭಾಗದಲ್ಲಿ ಉದ್ಯೋಗಿಯಾಗಿದ್ದ ವಿವೇಕ್, ಇಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈತನು ತನ್ನ ಆತ್ಮಹತ್ಯೆಗೆ ಕಾರಣವೆಂದು ಬರೆದಿಟ್ಟ ಡೆತ್‌ನೋಟ್‌ ಪೊಲೀಸರಿಗೆ ಲಭ್ಯವಾಗಿದ್ದು.. ಆ ಡೆತ್‌ನೋಟ್‌ನಲ್ಲಿ... ನನ್ನ ಸಾವಿಗೆ ಉಗ್ರಗಾಮಿ ಸಂಘಟನೆಯೇ ಕಾರಣ. ಉಗ್ರಗಾಮಿ ಸಂಘಟನೆಯಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಅಪಾಯವಿದೆ ಎಂದು ಮೂರು ಪುಟಗಳ ಡೆತ್‌ ನೋಟ್‌ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ.

ಆದರೇ, ಪೊಲೀಸರು ವಿವೇಕ್ ಜೀವನಕ್ರಮಕ್ಕೂ ಡೆತ್ ನೋಟ್ ನಲ್ಲಿರುವ ಮಾಹಿತಿಗೂ ತಾಳೆಯಾಗದ ಹಿನ್ನೆಲೆ ವಿವರಗಳ ಸತ್ಯಾಸತ್ಯತೆ ಪರಿಶಿಸಲು ಮುಂದಾಗಿದ್ದಾರೆ. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ತನಿಖೆಯ ನಂತ್ರ ವಿವೇಕ್ ಸಾವಿಗೆ ನಿಖರ ಕಾರಣ ತಿಳಿಯಲಿದೆ.

Next Story

RELATED STORIES