Top

ಯೂಟರ್ನ್‌ ಹೊಡೆದ ಬಿ ಎಸ್‌ ಯಡಿಯೂರಪ್ಪ!

ಯೂಟರ್ನ್‌ ಹೊಡೆದ ಬಿ ಎಸ್‌ ಯಡಿಯೂರಪ್ಪ!
X

ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಪಕ್ಷದವರಿಗೆ ಶಾಕ್ ಕಾದಿದೆ. ರಾಜಕಾರಣದಲ್ಲಿ ಅಲ್ಲೋಲ್ಲ ಕಲ್ಲೋಲ ಹಾಗುತ್ತೇ ಎಂದಿದ್ದ ಬಿಎಸ್ ವೈ ಇದೀಗ ಯೂಟರ್ನ್ ಹೊಡೆದಿದ್ದಾರೆ.

ಈ ಕುರಿತು ಬಾಗಲಕೋಟೆಯ ಜಮಖಂಡಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಕಾಂಗ್ರೆಸ್ ಗೆ ಏನು ಶಾಕಿಂಗ್ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸದೇ ಹೊರಟ ಹೋದರು.

ಅಲ್ಲದೇ ಬಿಎಸ್ ವೈ ನಾನೇನು ಹೇಳಿಲ್ಲ, ಯಾರು ಆ ತರಹ ಹೇಳಿದ್ದು ನನ್ನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯೇ ನೀಡುವ ಮೂಲಕ ತಮ್ಮ ಮಾತಿನಿಂದ ನುಣುಚಿಕೊಂಡರು.

ಇದೇ ಸಂಧರ್ಭದಲ್ಲಿ ಮಾತನಾಡಿದ ಬಿಎಸ್ ವೈ ಜಮಖಂಡಿ ಯಲ್ಲಿ ಈ ಬಾರಿ ಶ್ರೀಕಾಂತ್ ಕುಲಕರ್ಣಿ ಗೆಲ್ಲುತ್ತಾರೆ. ಮೂರು ಲೋಕಸಭಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಮಂಡ್ಯದಲ್ಲಿ ಡಾ.ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ನಮ್ಮ ನಾಯಕರೆಲ್ಲಾ ಒಗ್ಗಟ್ಟಾಗಿ ಇವರನ್ನು ಗೆಲ್ಲಿಸಬೇಕು ಎಂದರು.

ಈಗಾಗಲೇ ಬಳ್ಳಾರಿ, ಶಿವಮೊಗ್ಗಯಲ್ಲಿ ನಾವೀಗ ಗೆದ್ದಾಗಿದೆ. ಕಳೆದ ಬಾರಿ ಜಮಖಂಡಿಯಲ್ಲಿ ಕಡಿಮೆ ಅಂತರದಲ್ಲಿ ಶ್ರೀಕಾಂತ್ ಕುಲಕರ್ಣಿ ಸೋತಿದ್ದರು. ನಾನು ಇನ್ನೊಮ್ಮೆ ಜಮಖಂಡಿಗೆ ಬರ್ತಿನಿ. ನೂರಕ್ಕೆ ನೂರು ಶ್ರೀಕಾಂತ್ ಕುಲಕರ್ಣಿ ಗೆಲ್ಲಿಸ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದರು.

Next Story

RELATED STORIES