Top

ಗುಜರಾತ್, ಯುಪಿ ಬಿಹಾರದಿಂದ ಜನರನ್ನು ಹೆದರಿಸಿದ್ದರ ಹಿಂದೆ ರಾಜಕೀಯ-ಸೌರಭ್ ಪಟೇಲ್

ಗುಜರಾತ್, ಯುಪಿ ಬಿಹಾರದಿಂದ ಜನರನ್ನು ಹೆದರಿಸಿದ್ದರ ಹಿಂದೆ ರಾಜಕೀಯ-ಸೌರಭ್ ಪಟೇಲ್
X

ಗುಜರಾತಿನಿಂದ ಯುಪಿ,ಬಿಹಾರ ಜನರನ್ನು ಹೆದರಿಸಿ ಕಳುಹಿಸುವ ಯತ್ನದ ಹಿಂದೆ ರಾಜಕೀಯ ಶಡ್ಯಂತ್ರವಿದೆ ಅಂತ ಗುಜರಾತ್ ನ ಇಂಧನ ಸಚಿವ ಸೌರಭ್ ಪಟೇಲ್ ಹೇಳಿಕೆ ನೀಡಿದರು.

ಖಾಸಗಿ ಹೋಟಲ್ ವೊಂದರಲ್ಲಿ ಮಾತನಾಡಿದ ಅವರು, ಕಳೆದ 50 ವರ್ಷಗಳಿಂದ ನೆಮ್ಮದಿಯಾಗಿದ್ದವರ ನೆಮ್ಮದಿ ಕೆಡಿಸುವ ಪ್ರಯತ್ನ ನಡೆದಿದೆ. ನಮ್ಮ ಮುಖ್ಯಮಂತ್ರಿಯವರು ಉತ್ತರ ಪ್ರದೇಶಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಹೊರ ಹೋಗಿರುವವರ ಸಂಖ್ಯೆ ಶೇಕಡಾ ಒಂದರೆಡರಷ್ಟಿರಬಹುದು. ಮೇಲಾಗಿ ದಸರಾ ದುರ್ಗಾಪೂಜಾಗೆ ಪ್ರತಿ ವರ್ಷ ಜನ ಹೀಗೆ ಹೋಗುವ ರೂಢಿ ಇದೆ. ದಸರ ರಜೆ ಕಳೆದ ಬಳಿಕ ಅವರೆಲ್ಲರೂ ಮರಳಿ ಬರುತ್ತಾರೆ. ಗುಜರಾತ್‌ ನಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ಬಂದಿರುವ ಜನ ವಾಸ ಮಾಡ್ತಿದ್ದಾರೆ ಎಂದರು.

ಗುಜರಾತ್ ಪ್ರಗತಿಗೆ ಈ ಜನರ ಕೊಡುಗೆಯೂ ಇದೆ ಗಲಭೆಯಿಂದ ಗುಜರಾತ್ ನಿಂದ ಹೊರಗೆ ಹೋಗಿರುವ ಬಿಹಾರಿಗಳು ವಾಪಸಾಗಲಿದ್ದಾರೆ. ಗುಜರಾತ್ ನಲ್ಲಿ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಬಿಹಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸಿದ್ದೇವೆ. ಗಲಭೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

Next Story

RELATED STORIES