Top

ವರುಣನ ಆರ್ಭಟ : ನೆಲಮಂಗಲದ ಮಾರುಕಟ್ಟೆ ಜಲಾವೃತ!

ವರುಣನ ಆರ್ಭಟ : ನೆಲಮಂಗಲದ ಮಾರುಕಟ್ಟೆ ಜಲಾವೃತ!
X

ಮಳೆ ಬಂತೆಂದರೆ ಬೆಂಗಳೂರಿಗರಿಗೆ ಸಂಕಷ್ಟ ತಪ್ಪಿದ್ದಲ್ಲ. ಇಂದು ಕೂಡಾ ಸಿಲಿಕಾನ್ ಸಿಟಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಆದ ಅನಾಹುತಗಳು ಒಂದೆರೆಡಲ್ಲ. ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ತರಕಾರಿ ಮಾರುಕಟ್ಟೆಗೆ ನೀರು ನುಗ್ಗಿದೆ..

ನೆಲಮಂಗಲ ತಾಲೂಕಿನ ತರಕಾರಿ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು. ಸತತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ತಾಲೂಕು ಪಂಚಾಯತಿ ವತಿಯಿಂದ ನಿರ್ಮಿಸಲಾಗಿದ್ದ ಮಾರುಕಟ್ಟೆಗೆ ನೀರು ನುಗ್ಗಿದೆ. ಪರಿಣಾಮ ಮಾರುಕಟ್ಟೆಯಲ್ಲಿನ ತರಕಾರಿಗಳೆಲ್ಲ ಮಳೆ ನೀರಲ್ಲಿ ನೆಂದು ಹಾಳಾಗಿವೆ.

ಮಾರುಕಟ್ಟೆ ಕೂಡ ಸಂಪೂರ್ಣ ಅಸ್ತವ್ಯಸ್ತತಗೊಂಡಿದ್ದು ತರಕಾರಿ ಮಾರಟಗಾರರು ಆತಂಕಕ್ಕೀಡಾಗಿದ್ದಾರೆ.. ಇನ್ನೂ ಮಾರುಕಟ್ಟೆಯ ಕೆಲ ಅಂಗಡಿಗಳಂತೂ ಜಲಾವೃತವಾಗಿದ್ದು. ಅಂಗಡಿ ಮಾಲೀಕರು ನೀರನ್ನ ಹೋರಹಾಕಲು ಹರಸಾಹಸ ಪಡುವಂತಾಗಿದೆ..

ಈ ಕುರಿತು ಆಕ್ರೋಶ ಹೊರಹಾಕಿರುವ ಮಾರುಕಟ್ಟೆ ವರ್ತಕರು ಅವೈಜ್ಞಾನಿಕವಾಗಿ ಮಾರುಕಟ್ಟೆಯನ್ನ ನಿರ್ಮಿಸಿದ್ದಾರೆ ಅಂತ ತಾಲ್ಲೂಕ್ ಪಂಚಾಯತ್ ವಿರುದ್ಧ ಕಿಡಿಕಾರಿದ್ರು..

Next Story

RELATED STORIES