Top

ಜಾತಿವಾರು ಮತಗಳ ಮೇಲೆ ಕೈ ನಾಯಕರ ಕಣ್ಣು : ಉಪಚುನಾವಣೆ ಗೆಲುವಿಗೆ ತಂತ್ರ!

ಜಾತಿವಾರು ಮತಗಳ ಮೇಲೆ ಕೈ ನಾಯಕರ ಕಣ್ಣು : ಉಪಚುನಾವಣೆ ಗೆಲುವಿಗೆ ತಂತ್ರ!
X

ಪ್ರಸ್ತುತ ನಡೆಯಲಿರುವ ಬಳ್ಳಾರಿ ಲೋಕಸಭೆ ಹಾಗೂ ಜಮಖಂಡಿ ವಿಧಾನಸಭೆ ಬೈ ಎಲೆಕ್ಷನ್ ಸಾಕಷ್ಟು ಕುತೂಹಲಕೆರಳಿಸಿದೆ. ಎರಡೂ ಕ್ಷೇತ್ರಗಳಲ್ಲೂ ತಮ್ಮದೇ ಅಭ್ಯರ್ಥಿಗಳನ್ನ ಕಣಕ್ಕಿಳಿಸಿರುವ ಕೈ ನಾಯಕರು ಗೆಲ್ಲಿಸಿಕೊಳ್ಳೋಕೆ ರಣತಂತ್ರ ರೂಪಿಸಿದ್ದಾರೆ.

ಜಾತಿವಾರು, ಸಮುದಾಯವಾರು ಮತಗಳನ್ನ ಸೆಳೆಯಲು ಅದೇ ಸಮುದಾಯಗಳ ನಾಯಕರಿಗೆ ಜವಾಬ್ದಾರಿ ನೀಡಿದ್ದಾರೆ. ಹೊಣೆಹೊತ್ತ ನಾಯಕರು ತಮ್ಮ ಸಮುದಾಯಗಳ ಸ್ಥಳೀಯ ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಅಭ್ಯರ್ಥಿಗೆ ಮತಹಾಕಿಸಲೂ ನಿರ್ಧಾರಿಸಿದ್ದಾರೆ.

ಇನ್ನು ಬಳ್ಳಾರಿ ಮತ್ತು ಜಮಖಂಡಿಯಲ್ಲಿ ಪ್ರಮುಖವಾಗಿ ಲಿಂಗಾಯತ ಮತಗಳ ಮೇಲೆಯೇ ಕೈ ನಾಯಕರು ಕಣ್ಣಿಟ್ಟಿದ್ದಾರೆ.ಬಿಜೆಪಿಯತ್ತ ಹೋಗುವ ಮತಗಳನ್ನ ಸೆಳೆಯಲೂ ರೂಪುರೇಷೆಯನ್ನೂ ಸಿದ್ಧಪಡಿಸಿದ್ದಾರೆ. ಅದರಂತೆ ಬಳ್ಳಾರಿಯಲ್ಲಿ ಸಚಿವ ರಾಜಶೇಖರ್ ಪಾಟೀಲ್, ಮಾಜಿ ಸಚಿವ ಶರಣ ಪ್ರಕಾಶ್ ಪಾಟೀಲ್ ರಿಂದ ನಾಯಕ ಅಲ್ಲಂ ವೀರಭದ್ರಪ್ಪಗೆ ಉಸ್ತುವಾರಿ ನೀಡಲಾಗಿದೆ..

ದಲಿತ ಬಲಗೈ ಮತಗಳನ್ನ ಒಟ್ಟುಗೂಡಿಸೋಕೆ ಸಚಿವ ಪ್ರಿಯಾಂಕ ಖರ್ಗೆ, ಸಂಸದ ಧೃವನಾರಾಯಣಗೆ ಸಾರಥ್ಯ ವಹಿಸಲಾಗಿದೆ. ಎಡಗೈ ಸಮುದಾಯದ ಮತಗಳು ಪಕ್ಷದ ಅಭ್ಯರ್ಥಿಗೆ ಬೀಳುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನ ಮಾಜಿ ಸಚಿವ ಆಂಜನೇಯ ಹಾಗೂ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯಗೆ ಹೊರಿಸಲಾಗಿದೆ.

ಮುಸ್ಲಿಂ ಮತಗಳನ್ನ ಸೆಳೆಯಲು ಸಚಿವ ಯು.ಟಿ.ಖಾದರ್, ಕುರುಬ ಸಮುದಾಯದ ಮತ ಸೆಳೆಯಲು ಭೈರತಿ ಬಸವರಾಜು, ರಾಮಪ್ಪ, ಹಿಟ್ನಾಳ್ಗೆ ಜವಾಬ್ದಾರಿ ನೀಡಲಾಗಿದೆ. ಹಾಗೆಯೇ ಕ್ರಿಶ್ಚಿಯನ್ ಮತ ಸೆಳೆಯಲು ಐವಾನ್ ಡಿಸೋಜಾಗೆ, ಗೌಡ, ರೆಡ್ಡಿ ಮತಗಳನ್ನ ಸೆಳೆಯೋಕೆ ಸಚಿವ ಕೃಷ್ಣಭೈರೇಗೌಡ ಹಾಗೂ ಶಿವಶಂಕರ ರೆಡ್ಡಿಗೆ ಜವಾಬ್ದಾರಿ ವಹಿಸಲಾಗಿದೆ..ಜಿಲ್ಲೆಯಲ್ಲಿ ನಿರ್ಣಾಯಕ ಮತದಾರರಿರುವ ವಾಲ್ಮೀಕಿ ಸಮುದಾಯವನ್ನ ಸೆಳೆಯಲುಸಚಿವ ರಮೇಶ್ ಜಾರಕಿಹೊಳಿಗೆ ಹೊಣೆ ಹೊರಿಸಲಾಗಿದೆ..

ಆದೇ ರೀತಿ ಜಮಖಂಡಿಯಲ್ಲಿ ಆನಂದ್ ನ್ಯಾಮಗೌಡರನ್ನ ಗೆಲ್ಲಿಸಿಕೊಳ್ಳಲು ಇದೇ ಕಾರ್ಯತಂತ್ರ ಅನುಸರಿಸಿದ್ದಾರೆ. ಡಿಸಿಎಂ ಡಾ.ಜಿ.ಪರಮೇಶ್ವರ್‌ ಸಂಪೂರ್ಣ ಉಸ್ತುವಾರಿ ವಹಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ..

ಲಿಂಗಾಯತ ಮತಸೆಳೆಯಲು ಈಶ್ವರ್ ಖಂಡ್ರೆ, ಎಂಬಿ ಪಾಟೀಲ್, ಎಸ್.ಆರ್.ಪಾಟೀಲ್, ಕುರುಬ ಸಮುದಾಯದ ಮತಗಳನ್ನ ಸೆಳೆಯೋಕೆ ಸ್ವತಃ ಸಿದ್ದು ಮೈಕೊಡವಿ ಎದ್ದಿದ್ದಾರೆ. ಬಲಗೈ ಮತ ಸೆಳೆಯಲು ಪರಂ, ಎಡಗೈ ಮತ ಸೆಳೆಯಲು ಆರ್.ಬಿ.ತಿಮ್ಮಾಪೂರ ಇದ್ದಾರೆ.

ಬಳ್ಳಾರಿಯಲ್ಲಿ ಉಗ್ರಪ್ಪ ಆಯ್ಕೆಗೆ ರಮೇಶ್ ಜಾರಕಿಹೊಳಿ, ನಾಗೇಂದ್ರ ಹಾಗೂ ಆನಂದ್ ಸಿಂಗ್ ಅಸಮಾಧಾನಗೊಂಡಿದ್ದಾರೆ. ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್​ಗೆ ಅವಕಾಶ ಸಿಗದ ಹಿನ್ನೆಲೆ ಡಿ.ಕೆ.ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ..

ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾವು ಮಾಧ್ಯಮಗಳ ಮುಂದೆ ಫೋಸ್ ಕೋಡೋರಲ್ಲ. ಸಾಮಾನ್ಯ ಕಾರ್ಯಕರ್ತ ಕೂಡ ಪ್ರಭಾವಿ ನಾಯಕನೇ ಅಂತ ಡೋಸ್ ನೀಡಿದ್ದಾರೆ. ಅಲ್ಲದೆ ಇವತ್ತು ಉಗ್ರಪ್ಪ ನಾಮಪತ್ರ ಸಲ್ಲಿಸುವ ವೇಳೆ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದರು.

ಒಟ್ಟಿನಲ್ಲಿ ಬಳ್ಳಾರಿ ಹಾಗೂ ಜಮಖಂಡಿ ಉಪಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸೋಕೆ ಕೈ ನಾಯಕರು ಭರ್ಜರಿ ಗೇಮ್ ಪ್ಲಾನ್ ರೂಪಿಸಿದ್ದಾರೆ. ಬಿಜೆಪಿಗೆ ಎದಿರೇಟು ನೀಡೋಕೆ ತೆರೆಮರೆಯಲ್ಲೂ ಕಾರ್ಯತಂತ್ರ ರೂಪಿಸ್ತಿದ್ದಾರೆ. ಇದರ ನಡುವೆಯೇ ಮತ್ತೆ ಕೈನಲ್ಲಿ ಅಸಮಾಧಾನವೂ ವ್ಯಕ್ತವಾಗಿದೆ. ಇದನ್ನ ಹಿರಿಯ ನಾಯಕರು ಅದೇಗೆ ಶಮನಮಾಡ್ತಾರೆ ಅನ್ನೋದನ್ನ ನೋಡಬೇಕಷ್ಟೇ.

Next Story

RELATED STORIES