Top

ಮೈತ್ರಿ ಸರ್ಕಾರ ಬಿಳಿಸೋಕೆ ಬಿಜೆಪಿಯಿಂದ ಹೊಸ ಬ್ರಹ್ಮಾಸ್ತ್ರ.?!

ಮೈತ್ರಿ ಸರ್ಕಾರ ಬಿಳಿಸೋಕೆ ಬಿಜೆಪಿಯಿಂದ ಹೊಸ ಬ್ರಹ್ಮಾಸ್ತ್ರ.?!
X

ದೋಸ್ತಿಗಳನ್ನು ಸಂಕಷ್ಟಕ್ಕೆ ಸಿಲುಕಿಸಲು ಬಿಜೆಪಿ ಸಜ್ಜಾಗಿದೆ. ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ಪ್ರಯೋಗಿಸಿದ್ದ ಅಸ್ತ್ರ ವನ್ನೇ ಲೋಕಸಭೆ ಚುನಾವಣೆಗೂ ಪ್ರಯೋಗಿಸಲು ಕಮಲ ಪಡೆ ಸಜ್ಜಾಗಿದೆ. ಬಿಜೆಪಿ ಪ್ಲಾನ್ ಈ ಬಾರಿಯೂ ವರ್ಕೌಟ್ ಆದರೆ ಸಿಎಂ ಕುಮಾರಸ್ವಾಮಿ ಸರ್ಕಾರ ಇಕ್ಕಟ್ಟಿಗೆ ಸಿಲುಕೋದು ಖಚಿತ ಎನ್ನಲಾಗಿದೆ.

ಮೈತ್ರಿ ಸರ್ಕಾರವನ್ನೇ ಸಂಕಷ್ಟಕ್ಕೆ ಸಿಲುಕಿಸಲು ಬಿಜೆಪಿ ದೊಡ್ಡ ಅಸ್ತ್ರವನ್ನು ರೆಡಿ ಮಾಡಿಕೊಂಡಿದೆ. ಈ ಅಸ್ತ್ರದ ಐಡಿಯಾ ಕೊಟ್ಟವರು ಮಾತ್ರ ಸಂಘ ಪರಿವಾರದ ಮುಖಂಡರು. ಬಿಜೆಪಿ ಬಳಸೋ ಅಸ್ತ್ರ ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯೇ ಪತರುಗುಟ್ಟಿ ಹೋದರೂ ಆಶ್ಚರ್ಯ ಪಡಬೇಕಾಗಿಲ್ಲ. ಈಗಾಗಲೇ ಸರ್ಕಾರದ ವಿರುದ್ಧ ಅಸ್ತ್ರ ಬಿಡಲು ಬಿಜೆಪಿ ಎಲ್ಲಾ ತಯಾರಿ ಮಾಡಿಕೊಂಡಿದೆ.

ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರ ನವಂಬರ್ 10 ರಂದು ಟಿಪ್ಪು ಜಯಂತಿ ಆಚರಿಸೋ ಮೂಲಕ ಅನಗತ್ಯ ವಿವಾದವನ್ನು ಮೈಮೇಲೆ ಎಳೆದುಕೊಂಡಿತ್ತು. ಪರಿಣಾಮ 2015 ರಲ್ಲಿ ಕೊಡಗಿನಲ್ಲಿ ಕೋಮುಗಲಭೆಗೆ ಕಾರಣವಾಗಿ ಕುಟ್ಟಪ್ಪ ಎಂಬುವವರ ಹೆಣವೂ ಬಿದ್ದಿತ್ತು.

2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ಎಲ್ಲಾ ಜನಪ್ರಿಯ ಕಾರ್ಯಕ್ರಮಗಳನ್ನು ಟಿಪ್ಪು ಜಯಂತಿ ವಿವಾದ ನುಂಗಿ ನೀರು ಕುಡಿಯಿತು. ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಬಿಂಬಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಇದೀಗ ರಾಜ್ಯ ಬಿಜೆಪಿಗೆ ಸಂಘ ಪರಿವಾರದ ನಾಯಕರು ಮತ್ತದೇ ಟಿಪ್ಪು ಅಸ್ತ್ರವನ್ನು 2019ರ ಲೋಕಾ ಚುನಾವಣೆಗೆ ಬಳಸುವಂತೆ ಸಲಹೆ ನೀಡಿದ್ದಾರೆ.

2019ರ ಲೋಕಸಬಾ ಚುನಾವಣೆಗೆ ಟಿಪ್ಪು ಅಸ್ತ್ರ ಇಟ್ಟುಕೊಂಡು ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕಮಲ ಪಡೆ ನಿರ್ಧರಿಸಿದೆ ಲೋಕಸಭೆ ಚುನಾವಣೆಗೆ ಮೈತ್ರಿ ಸರ್ಕಾರ ಹಿಂದೂ ವಿರೋಧಿ ಎಂದು ಬಿಂಬಿಸಿ ಹಿಂದೂ ಮತಗಳ ಕ್ರೋಢಿಕರಣಕ್ಕೆ ಬಿಜೆಪಿ ಟಿಪ್ಪು ಅಸ್ತ್ರ ಮೊರೆ ಹೋಗಲು ತೀರ್ಮಾನಿಸಿದೆ. ಆ ಮೂಲಕ ಸಿಎಂ ಕುಮಾರಸ್ವಾಮಿಯವರನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಹೇಗಿದ್ದರೂ ಸಿಎಂ ಕುಮಾರಸ್ವಾಮಿ ಟಿಪ್ಪು ಜಯಂತಿ ಆಚರಿಸೋದು ಗ್ಯಾರಂಟಿ ಎಂದು ನಂಬಿಕೊಂಡೆ ಸಂಘ ಪರಿವಾರ ಬಿಜೆಪಿಗೆ ಟಿಪ್ಪು ಅಸ್ತ್ರ ನೀಡಿದೆ.

ಬಿಜೆಪಿಯ ಟಿಪ್ಪು ಅಸ್ತ್ರಕ್ಕೆ ಸಿಎಂ ಕುಮಾರಸ್ವಾಮಿ ಉತ್ತರಿಸಲು ತಡಬಡಾಯಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅಪ್ರಸ್ತುತ ಎಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಟಿಪ್ಪು ಅಸ್ತ್ರದ ರಿವೀಲ್ ಬಿಟ್ಟುಕೊಡಲು ತಯಾರಿಲ್ಲ.

ಬಿಜೆಪಿ 2019 ರ ಲೋಕಸಭೆ ಚುನಾವಣೆಗೆ ಟಿಪ್ಪು ಅಸ್ತ್ರ ಪ್ರಯೋಗಿಸಲು ಸಜ್ಜಾಗಿದೆ. ಬಿಜೆಪಿಯ ಈ ಪ್ಲ್ಯಾನ್ ಗೆ ದೋಸ್ತಿಗಳು ಮಣಿಯುತ್ತಾರಾ? ಅನ್ನೋದೆ ಕುತೂಹಲ.

Next Story

RELATED STORIES