Top

'ರಾಜಕಾರಣಿಗಳಿಗೆ ಕಪಾಳಮೋಕ್ಷ ಮಾಡಿದ್ರೆ 25ಸಾವಿರ ರೂ. ಬಹುಮಾನ'

ರಾಜಕಾರಣಿಗಳಿಗೆ ಕಪಾಳಮೋಕ್ಷ ಮಾಡಿದ್ರೆ 25ಸಾವಿರ ರೂ. ಬಹುಮಾನ
X

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆ ಬೆಳಗಾವಿಯಲ್ಲಿ ಕರಾಳ ದಿನ ಆಚರಣೆ ಹಿನ್ನೆಲೆ, ರಾಜಕಾರಣಿಗಳಿಗೆ ಕಪಾಳಮೋಕ್ಷ ಮಾಡಿದ್ರೆ 25ಸಾವಿರ ರೂಪಾಯಿ ಬಹುಮಾನ ಕೊಡುತ್ತೇನೆಂದು ಘೋಷಣೆ ಮಾಡಲಾಗಿದೆ.

ಬೆಳಗಾವಿಯಲ್ಲಿ ಮಾತನಾಡಿದ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್, ಕರಾಳ ದಿನಕ್ಕೆ ಬೆಂಬಲಿಸುವ, ಪರೋಕ್ಷವಾಗಿ ಅನುಮತಿ ಕೊಡಿಸುವ ರಾಜಕಾರಣಿಗಳಿಗೆ ಕಪಾಳಮೋಕ್ಷ ಮಾಡಲು ಕರೆ ನೀಡಿದ್ದಾರೆ.

ಅಲ್ಲದೇ ಜಿಲ್ಲಾಡಳಿತವು ಕರಾಳ ದಿನದ ರ್ಯಾಲಿಗೆ ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ನೀಡಿದ್ದೇ ಆದರೆ ಅನುಮತಿ ನೀಡುವಲ್ಲಿ ಬೆಳಗಾವಿ ರಾಜಕಾರಣಿಗಳು ಹಸ್ತಕ್ಷೇಪ ಮಾಡಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ರಾಜಕಾರಣಿಗಳು ಅನುಮತಿ ಕೊಡುವಲ್ಲಿ ಮುಂದಾದರೆ ಅಂಥವರಿಗೆ ಕಪಾಳಮೋಕ್ಷ ಮಾಡಲಾಗುವುದು ಎಂದು ಹೇಳಿದ್ದಾರೆ.

ಅಲ್ಲದೇ ಅಂಥವರನ್ನು ಗೊತ್ತುಪಡಿಸಿ ಕಪಾಳಮೋಕ್ಷ ಮಾಡಿದವರಿಗೆ ಕರ್ನಾಟಕ ನವನಿರ್ಮಾಣ ಸೇನೆಯಿಂದ 25ಸಾವಿರ ರೂಪಾಯಿಯನ್ನು ಬಹುಮಾನ ನೀಡಲಾಗುವುದು ಮತ್ತು ಮಹಿಳೆಯರಿಂದ ಕರಾಳ ದಿನ ತಡೆಯಲು ಒನಕೆ ಚಳುವಳಿ ಮಾಡಲಾಗುವುದು ಎಂದು ಬೆಳಗಾವಿಯಲ್ಲಿ ಭೀಮಾಶಂಕರ್ ಪಾಟೀಲ್ ಹೇಳಿಕೆ ನೀಡಿದ್ದಾರೆ.

Next Story

RELATED STORIES