ಕದ್ದ ವಸ್ತುಗಳನ್ನು ಈ ಖತರ್ನಾಕ್ ಕಳ್ಳರು ಏನು ಮಾಡ್ತ ಇದ್ರು ಗೊತ್ತಾ..?

ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಏರಿಯಾವೆಲ್ಲಾ ಓಡಾಡಿ, ನ್ಯೂಸ್ ಪೇಪರ್ ಹಾಗೆ ಬಿದ್ದಿರೋದನ್ನು ಮತ್ತು ರಂಗೋಲಿ ಹಾಕದೇ ಇರೋ ಮನೆಗಳನ್ನು ಐಡೆಂಟಿಫೈ ಮಾಡೋ ಖತರ್ನಾಕ್ ಕಳ್ಳರು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿದ್ದವು. ಈ ಕುರಿತು ತಲೆಕೆಡಿಸಿಕೊಂಡ ಪೊಲೀಸರು, ಇನ್ಸ್ಪೆಕ್ಟರ್ ಕೃಷ್ಣಾ ನೇತೃತ್ವದಲ್ಲಿ ತಂಡವನ್ನು ರಚಿಸಿ, ಕಾರ್ಯಾಚರಣೆಗೆ ಇಳಿದಿತ್ತು.
ಈ ವೇಳೆ ಮಹೇಶ್ ಮತ್ತು ದಯಾನಂದ್ ಎಂಬ ಕಳ್ಳರನ್ನು ಬಂಧಿಸಿರುವ ತಂಡ, ಬಂಧಿತರಿಂದ 42 ಲಕ್ಷ ಮೌಲ್ಯದ 20 ಗ್ರಾಂ ಚಿನ್ನ, ಡೈಮಂಡ್ ಬಳೆ, 2 ಕೆಜಿ ಬೆಳ್ಳಿ ಹಾಗೂ ನಾಲ್ಕು ದ್ವಿಜಕ್ರವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಅಂದಹಾಗೇ, ಮಹೇಶ್ ಮತ್ತು ದಯಾನಂದ್ ಬಂಧನದಿಂದಾಗಿ, 15 ಮನೆಗಳ್ಳತನ ಪ್ರಕರಣಗಳಿಗೆ ಸುಖಾಂತ್ಯ ದೊರೆತಂತಾಗಿದೆ.
ಇನ್ನೂ ಕಳ್ಳತನ ಮಾಡಿ ಕದ್ದ ವಸ್ತುಗಳನ್ನು ಮಾರುತ್ತಿದ್ದ ಆರೋಪಿಗಳು, ಬಂದ ಹಣವನ್ನು ಇಸ್ಪೀಟ್ ಅಡ್ಡೆಗೆ ತೆರಳಿ, ಆಟದಲ್ಲಿ ತೊಡಗಿ ಮೋಜು ಮಸ್ತಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 15 ಕಡೆ ಮನೆಗಳ್ಳತನ ಮಾಡಿದ್ದ ಆರೋಪಿಗಳು, ಕದ್ದ
ಈ ಕುರಿತಂತೆ ಚೆನ್ನಮ್ಮನಕೆರೆ ಅಚ್ಚಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಅಚ್ಚುಕಟ್ಟು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೃಷ್ಣ ನೇತೃತ್ವದ ತಂಡದಿಂದ ಮನೆಗಳ್ಳರ ಬಂಧನ ಮಾಡಲಾಗಿದ್ದು ಹೆಚ್ಚಿನ ತನಿಖೆಯನ್ನು ಆರಂಭಿಸಿದ್ದಾರೆ.