Top

ಸ್ವಾಮಿಗಳು ದುಡಿಯದೇ ದುಡ್ಡು ಮಾಡುತ್ತಿದ್ದಾರೆ- ಸಾಹಿತಿ ವ್ಯಂಗ್ಯ

ಸ್ವಾಮಿಗಳು ದುಡಿಯದೇ ದುಡ್ಡು ಮಾಡುತ್ತಿದ್ದಾರೆ- ಸಾಹಿತಿ ವ್ಯಂಗ್ಯ
X

ಚಿತ್ರದುರ್ಗ: ಜಾತಿಗೊಂದು ಮಠಗಳಾಗಿದೆ. ಹೀಗಿದ್ದಾಗ ಜಾತಿ ನಾಶ ಸಾಧ್ಯವೇ ಎಂದು ಹೇಳುವ ಮೂಲಕ ಸಾಹಿತಿ ಬಿ.ಎಲ್.ವೇಣು ಮಠಾಧೀಶರ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಚಿತ್ರದುರ್ಗ ನಗರದ ತ.ರಾ.ಸು ರಂಗಮಂದಿರದಲ್ಲಿ ನಡೆದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಬಿ.ಎಲ್.ವೇಣು, ಚಿತ್ರದುರ್ಗದಲ್ಲಿ ಏನಾಗದಿದ್ದರೂ ಊರತುಂಬ ಮಠಗಳಾಗಿದೆ. ಜಾತಿಗೊಂದು ಮಠಗಳಾದ ಮೇಲೆ ಜಾತಿ ವಿನಾಶ ಸಾಧ್ಯವೆ?.. ಜಾತಿ ಮಠಗಳಿಂದ ಆಯಾ ಸಮುದಾಯಗಳು ಉದ್ಧಾರ ಆಗಿವೆಯೇ?.. ಸ್ವಾಮಿಗಳಿಗೆ ಸ್ವಾಮಿ ಎಂಬುದೊಂದು ಉದ್ಯೋಗ ಸಿಕ್ಕಿದೆ ಎಂದು ಹೇಳಿದ್ದಾರೆ.

ರಾಜಕಾರಣಿಯೊಬ್ಬ ಜೈಲಿಗೆ ಹೋದರೆ ಮಾತನಾಡಿಸೋಕೆ ಹೋಗುವ ಸ್ವಾಮಿ ಇದ್ದಾರೆ. ಜೈಲಿಂದ ಬಂದಾಗ ಹೂಮಾಲೆ ಹಾಕಿ ಸ್ವಾಗತಿಸಲು ಹೋಗುವ ಸ್ವಾಮಿ ಇದ್ದಾರೆ. ಮೇಲ್ವರ್ಗದ ಮಠಗಳಿಗೆ ಹಣ ನೀಡಿ ನಮಗೇಕೆ ಕೊಡಲ್ಲ ಎಂದ ಓಬಿಸಿ ಸ್ವಾಮಿ ಇದ್ದಾರೆ. ಓಬಿಸಿ ಸ್ವಾಮಿಗಳ ಒಕ್ಕೂಟವೂ ನಮ್ಮಲ್ಲಿದೆ. ಗೋಸ್ವಾಮಿ, ರೇಪಿಸ್ಟ್ ಸ್ವಾಮಿ ಪಾಪಿಸ್ಟ್ ಸ್ವಾಮಿಗಳಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಅಲ್ಲದೇ ಮದಕರಿ ಚಿತ್ರಕ್ಕೆ ಸಂಬಂಧಪಟ್ಟಂತೆ ಜಾತಿ ವಿಷಯ ಅಡ್ಡಬಂದ ಬಗ್ಗೆ ಮಾತನಾಡಿದ ವೇಣು, ಇನ್ನೋರ್ವ ಸ್ವಾಮಿ ನಮ್ಮ ಜಾತಿಯವ್ರಿಗೇ ಸಿನೆಮಾದ ಹಿರೋ ಮಾಡಿ ಅಂತ ಬಾಯಿಬಡ್ಕೋತಾನೆ. ಇವರೆಲ್ಲಾ ಸ್ವಾಮಿಗಳಾ, ಬಸವ ತತ್ವ ಪರಿಪಾಲಕರಾ? ಎಂದು ಮಠಾಧೀಶರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾವಿ ಹಾಕಿದರೂ ಆಸೆ ಬಿಡಲಿಲ್ಲ, ಜಾತಿ ಬಿಡಲಿಲ್ಲ. ಸರ್ವ ಸಂಗ ಪರಿತ್ಯಾಗಿಗಳೆಂದು ಹೇಳಿ ಎಸಿ ರೂಮು, ಎಸಿ ಕಾರುಗಳಲ್ಲಿ ಮೆರೀತಾರೆ. ಸ್ವಾಮಿಗಳು ದುಡಿಯದೇ ದುಡ್ಡು ಮಾಡುತ್ತಿದ್ದಾರೆ. ಬಡವರಿಗೆ ಸರ್ಕಾರ ಅಕ್ಕಿ ಕೊಟ್ಟರೆ ಉರುಕೊಳ್ತಾರೆ. ಇಲ್ಲಿ ಚುನಾವಣೆ ಬಂದರೆ ಮಠಗಳದ್ದೇ ಪಾರುಪತ್ಯ. ಎಲೆಕ್ಷನ್ ನಿಲ್ಲಿಸಿ ಗೆದ್ದುಕೊಳ್ಳುವ ಸಮರ್ಥ, ಲಾಭಕೋರ ಸ್ವಾಮಿಗಳಿದ್ದಾರೆ ಎಂದು ಹೇಳಿದ್ದಾರೆ.

ಕೊನೆಗೆ ಎಲ್ಲರೂ ಹಾಗಲ್ಲ, ಒಳ್ಳೆ ಸ್ವಾಮಿಗಳೂ ಇದ್ದಾರೆ, ಈ ಮಾತು ನನಗೆ ನಿರೀಕ್ಷಣಾ ಜಾಮೀನು ಎಂದಿದ್ದಾರೆ.

Next Story

RELATED STORIES