ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ; ರೋಗಿಗಳ ಪರದಾಟ..!

X
TV5 Kannada15 Oct 2018 12:29 PM GMT
ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಸರ್ಕಾರಿ ಆಸ್ಪತ್ರೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡುತ್ತದೆ. ಹಲವಾರು ಸೌಲಭ್ಯ ಒದಗಿಸುತ್ತದೆ. ಆದರೆ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಸಮುದಾಯ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ.
ಹೌದು...ಇಲ್ಲಿ ಸಮರ್ಪಕ ಸಿಬ್ಬಂದಿಯಿಲ್ಲದೇ ರೋಗಿಗಳು ಪರದಾಡುವಂಥ ಪರಿಸ್ಥಿತಿ ಉಂಟಾಗಿದೆ. ಆಸ್ಪತ್ರೆಗೆ ಸೂಕ್ತ ಕಟ್ಟಡವೂ ಇಲ್ಲ. ಇದು ಹೇಳಿಕೊಳ್ಳಲು ಮಾತ್ರ ದೊಡ್ಡಾಸ್ಪತ್ರೆ. ಆದರೆ, ಈ ಆಸ್ಪತ್ರೆಯಲ್ಲಿ ಪ್ರಾಥಮಿಕ ಸೌಲಭ್ಯಗಳೂ ಕೂಡ ಇಲ್ಲ.
ಕೆಂಬಾವಿ ಪಟ್ಟಣ ಯಾದಗಿರಿ ಜಿಲ್ಲೆಗೆ ದೊಡ್ಡ ಪಟ್ಟಣ. ಹೀಗಾಗಿ, 1996ರಲ್ಲಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಯಿತು. ಇದರಿಂದ ಕೇವಲ ನಾಮಫಲಕ ಬದಲಾವಣೆ ಆಯಿತೇ ಹೊರತು, ಯಾವುದೇ ಮೂಲಸೌಕರ್ಯ ಇಲ್ಲಿವರೆಗೂ ಸಿಕ್ಕಿಲ್ಲ. ಈ ಬಗ್ಗೆ ರೋಗಿಗಳು ಮತ್ತು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.
Next Story