Top

ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ: ಪ್ರಜ್ವಲ್ ರೇವಣ್ಣ

ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ: ಪ್ರಜ್ವಲ್ ರೇವಣ್ಣ
X

‘ಕುಟುಂಬ ರಾಜಕಾರಣ ಇಂದು ಎಲ್ಲಾ ಪಕ್ಷದಲ್ಲಿದೆ. ಬಿಎಸ್‌ವೈ ಪುತ್ರ ಸ್ತರ್ಧಿಸುವ ಬಗ್ಗೆ ಏಕೆ ಯಾರೂ ಪ್ರಶ್ನೆ ಮಾಡಲ್ಲ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಏಕೆ?’ ಎಂದು ಹಾಸನದಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಪ್ರಶ್ನಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ‘ಅನಿತಾ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧಿಸುವ ವಿಚಾರವಾಗಿ ನಮ್ಮ ಕುಟುಂಬದಲ್ಲಿ ಯಾವುದೇ ಗೊಂದಲ ಹಾಗೂ ಅಸಮಾಧಾನ ಇಲ್ಲ. ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧಿಸ ಬಯಸುತ್ತಾರೆಂದು ಕೇವಲ ಹಿಂದಿನ ಚುನಾವಣೆಗೆ ಸೀಮಿತವಾಗಿ ಹೇಳಿದ ಮಾತು‘ ಎಂದು ಸ್ಪಷ್ಟನೆ ನೀಡಿದರು.

‘ಮಂಡ್ಯ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಇದೆಲ್ಲಾ ಉಹಾಪೋಹಾ. ಒಂದು ವೇಳೆ ಸ್ಪರ್ಧಿಸಿದರೆ ಅದು ಸಾರ್ವತ್ರಿಕ ಚುನಾವಣೆಯಲ್ಲಿ ಮಾತ್ರ. ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರವಾಗಿ ನಮ್ಮ ಜಿಲ್ಲೆಯ ಎಲ್ಲಾ ನಾಯಕರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಅ.25ರವರೆಗೆ ಕೊಡಗಿನಲ್ಲಿ 5 ದಿನ ಪ್ರವಾಸ ನಡೆಸಲಿದ್ದೇನೆ. ರಾಮನಗರದಲ್ಲಿ ಕಾಂಗ್ರೆಸ್ – ಜೆಡಿಎಸ್‌ನಲ್ಲಿ ಗೊಂದಲ ಹಾಗೂ ಪಕ್ಷದಲ್ಲಿನ ಗೊಂದಲವನ್ನು ಹಿರಿಯರು ಬಗೆಹರಿಸುತ್ತಾರೆ ‘ ಎಂದು ಹೇಳಿದರು.

Next Story

RELATED STORIES