Top

ಜೆಡಿಎಸ್ ವರಿಷ್ಠರ ವಿರುದ್ಧ ಲಕ್ಷ್ಮೀ ಬೆಂಬಲಿಗರ ಆಕ್ರೋಶ

ಜೆಡಿಎಸ್ ವರಿಷ್ಠರ ವಿರುದ್ಧ ಲಕ್ಷ್ಮೀ ಬೆಂಬಲಿಗರ ಆಕ್ರೋಶ
X

ಮಂಡ್ಯ: ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಡಾ.ಲಕ್ಷ್ಮೀ ಅಶ್ವಿನ್ ಗೌಡಗೆ ಜೆಡಿಎಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆ, ಲಕ್ಷ್ಮೀ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊನ್ನೆ ತನಕ ಲಕ್ಷ್ಮೀಯವರಿಗೆ ಟಿಕೆಟ್ ಕನ್ಫರ್ಮ್ ಎಂದಿದ್ದ ಜೆಡಿಎಸ್ ವರಿಷ್ಠರು, ನಿನ್ನೆ ಶಿವರಾಮೇಗೌಡ ಅಭ್ಯರ್ಥಿ ಎಂದು ಅಂತಿಮವಾಗಿ ಘೋಷಿಸಿದ್ದಾರೆ.ಈ ಕಾರಣಕ್ಕಾಗಿ ಆಕ್ರೋಶ ವ್ಯಕ್ತಪಡಿಸಿರುವ ಲಕ್ಷ್ಮೀ ಬೆಂಬಲಿಗರು, ಫೇಸ್‌ಬುಕ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿವರಾಮೇಗೌಡ ಸರಿಯಿಲ್ಲ ಎಂದ ನೀವು ಅವರಿಗೆ ಮಣೆ ಹಾಕಿದ್ದೀರ. ನಿಮ್ಮನ್ನ ನಂಬಿ ಬಂದವರ ಭವಿಷ್ಯ ಏನಾಗಬೇಕು..? ನಿಮ್ಮ ಮಾತಿಗೆ ಬೆಲೆಕೊಟ್ಟು ಲಕ್ಷ್ಮೀ ಅಶ್ವಿನ್‌ಗೌಡ ಐಆರ್‌ಎಸ್ ಹುದ್ದೆಗೆ ರಾಜೀನಾಮೆ ನೀಡಿ ಬಂದಿದ್ದಾರೆ. ಆದರೆ ನೀವು ಅವರಿಗೆ ಮಾಡಿದ ದ್ರೋಹ ಕ್ಷಮಿಸಲಾರದಂತಹದ್ದು ಎಂದು ಜೆಡಿಎಸ್ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಇದಕ್ಕೆ ಹಲವರು ಬೆಂಬಲ ವ್ಯಕ್ತಪಡಿಸಿದ್ದು, ಇನ್ನು ಕೆಲವರು ಮುಂದಿನ ವರ್ಷ ನಿಮಗೆ ಟಿಕೆಟ್ ಗ್ಯಾರಂಟಿ ಎಂದು ಸಪೋರ್ಟ್ ಮಾಡಿದ್ದಾರೆ.

Next Story

RELATED STORIES