ಫೀಬಾ ಪಂದ್ಯಾವಳಿ ವೀಕ್ಷಿಸಲು ಪ್ರವೇಶ ಶುಲ್ಕ ಉಚಿತ: ಡಾ.ಜಿ. ಪರಮೇಶ್ವರ್

ಫೀಬಾ( FIBA) ಏಷಿಯಾ ಮಹಿಳಾ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಗೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿ ಪೂರ್ವಭಾವಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಫೀಬಾ ಏಷಿಯಾ ಯು-18 ಮಹಿಳಾ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿ ಅ. 28 ರಿಂದ ನ.3 ರವರೆಗೆ ನಗರದ ಕಂಠೀರವ ಸ್ಟೇಡಿಯಂ ಹಾಗೂ ಕೋರಮಂಗಲದಲ್ಲಿ ನಡೆಯಲಿದ್ದು, ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಸತತ ಮೂರನೇ ಬಾರಿಗೆ ಬೆಂಗಳೂರಿನಲ್ಲಿ ಫೀಬಾ ಏಷಿಯಾ ಅಂಡರ್ 18 ಮಹಿಳಾ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಆಸ್ಟ್ರೆಲಿಯಾ, ನ್ಯೂಜಿಲ್ಯಾಂಡ್, ಚೈನಾ, ಜಪಾನ್, ಮಲೇಶಿಯಾ, ಇಂಡೋನೇಶಿಯಾ ಸೇರಿದಂತೆ ಒಟ್ಟು 16 ರಾಷ್ಟ್ರದಿಂದ 16 ತಂಡಗಳ 320 ಆಟಗಾರ್ತಿಯರು ಆಗಮಿಸುತ್ತಿದ್ದಾರೆ.
ಇವರಿಗೆ ಅಗತ್ಯ ಸೌಕರ್ಯ, ಸಾರಿಗೆ, ಆರೋಗ್ಯ, ವಸತಿ ಸೇರಿದಂತೆ ಎಲ್ಲ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು. ಎರಡು ಕೋಟಿ ರು. ವೆಚ್ಚದಲ್ಲಿ ಸ್ಟೇಡಿಯಂನನ್ನು ಮೇಲು ದರ್ಜೇಗೆ ಏರಿಸಿದ್ದು. ಅಂತಾರಾಷ್ಟ್ರೀಯ ಮಟ್ಟದ ಸ್ಟೇಡಿಯಂ ಇದಾಗಿದೆ ಎಂದು ತಿಳಿಸಿದರು. ಅಲ್ಲದೇ ಈ ಬಾರಿ ಪಂದ್ಯಾವಳಿ ವೀಕ್ಷಿಸಲು ಪ್ರವೇಶ ಶುಲ್ಕವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.