Top

ಹೆಚ್1ಎನ್1ಗೆ 6 ಜನರ ಸಾವು: ಡಾ.ಜಿ ಪರಮೇಶ್ವರ್

ಹೆಚ್1ಎನ್1ಗೆ 6 ಜನರ ಸಾವು: ಡಾ.ಜಿ ಪರಮೇಶ್ವರ್
X

ರಾಜ್ಯದಲ್ಲಿ ಇಲ್ಲಿಯವರೆಗೆ 456 ಜನರಲ್ಲಿ ಹೆಚ್1 ಎನ್1 ಸೋಂಕು ಪತ್ತೆಯಾಗಿದ್ದು, ಇಲ್ಲಿಯವರೆಗೆ 6 ಮಂದಿ ಮೃತಪಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅವರು ಮಾಧ್ಯಮಗಳಿಗೆ ಈ ವಿವರ ನೀಡಿದರು.

ಅಕ್ಟೋಬರ್​ನಿಂದೀಚಗೆ ಎಚ್​1ಎನ್​1ನ 456 ಪ್ರಕರಣಗಳು ಕಂಡು ಬಂದಿದೆ. ಜನವರಿಯಿಂದ ಅಕ್ಟೋಬರ್ ನಡುವಣ ಅವಧಿಯಲ್ಲಿ 4902 ಪ್ರಕರಣಗಳು ಪತ್ತೆಯಾಗಿದೆ. ಇದುವರೆಗೂ 6 ಜನ ಮೃತಪಟ್ಟಿದ್ದಾರೆ. ಕಳೆದ ವರ್ಷ 110 ಮಂದಿ ಮೃತಪಟ್ಟಿದ್ದರು ಎಂದರು.

ರಾಜ್ಯದಲ್ಲಿ ಎಚ್1 ಎನ್‌1 ಭೀತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕ ಕ್ರಮ‌ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಪರಮೇಶ್ವರ್ ಅಧಿಕಾರಿಗಳಿಗೆ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಎಚ್1 ಎನ್1 ನಿಂದ ಇಬ್ಬರ ಸಾವು ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ, ಅರಸೀಕೆರೆ, ತುಮಕೂರು, ಗುಲ್ಬಾರ್ಗಾದಲ್ಲಿ ತಲಾ ಒಂದೊಂದು ಸಾವು ಸಂಭವಿಸಿದೆ. ಗಾಳಿಯಲ್ಲಿ ರೋಗ ಹರಡುವುದರಿಂದ ರೋಗಿಯಿಂದ ಸ್ವಲ್ಪ ದೂರ ಇರುವುದು ಒಳ್ಳೆಯದು ಎಂದರು.

ರಾಜಸ್ಥಾನದಲ್ಲಿ ಜಿಕಾ ವೈರಸ್ ಬಂದಿದೆ. ಆದರೆ ಕರ್ನಾಟಕದಲ್ಲಿ ಒಂದೂ ಪ್ರಕರಣ ವರದಿಯಾಗಿಲ್ಲ ಈ ಬಗ್ಗೆಯೂ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ಶಾಸಕ ಗೋಪಾಲಯ್ಯ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಮೇಯರ್ ಗಂಗಾಂಬಿಕೆ, ರಾಜೀವ್ ಗಾಂಧಿ ಆರೋಗ್ಯ ಸಂಸ್ಥೆ ನಿರ್ದೇಶಕ ನಾಗರಾಜ್ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.

Next Story

RELATED STORIES