Top

'ಹಾಸನಾಂಬೆಯ ಆಚರಣೆಗೆ ಧಕ್ಕೆ ತಂದರೆ ಹೋರಾಟ ಮಾಡ್ತೇವೆ'

ಹಾಸನಾಂಬೆಯ ಆಚರಣೆಗೆ ಧಕ್ಕೆ ತಂದರೆ ಹೋರಾಟ ಮಾಡ್ತೇವೆ
X

ಹಾಸನ: ಪವಾಡ ಬಯಲಿನ ಹೆಸರಿನಲ್ಲಿ ಹಾಸನಾಂಬೆ ದೇವಿಯ ಆಚರಣೆಗೆ ಧಕ್ಕೆ ತಂದರೆ ಹೋರಾಟ ನಡೆಸುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಪವಾಡದ ಬಯಲಿಗೆ ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಒತ್ತಾಯಿಸಿದ ಹಿನ್ನೆಲೆ, ಹಾಸನಾಂಬ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿದ ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಇತ್ತೀಚೆಗಷ್ಟೇ ಹಾಸನಾಂಬೆ ದೇವಿಯು 15 ನಿಮಿಷಗಳ ಕಾಲ ಕಣ್ಣು ತೆರೆದಿದ್ದ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪವಾಡ ಬಯಲು ಮಾಡಲು ಭಾರತೀಯ ಜ್ಞಾನ-ವಿಜ್ಞಾನ ಸಮಿತಿ ಮುಂದಾಗಿತ್ತು. ಈ ವಿಷಯದ ಕುರಿತು ದೇವಾಲಯದ ಅರ್ಚಕರ ಜೊತೆ ಮುತಾಲಿಕ್ ಈ ಬಗ್ಗೆ ಚರ್ಚೆ ನಡೆಸಿದ್ದು, ಹಾಸನಾಂಬೆ ಪವಾಡದ ಸಾಧಕ ಬಾಧಕಗಳ ಕುರಿತು ಮಾಹಿತಿ ಪಡೆದರು.

ಮುಂದಿನ ಹೋರಾಟ ಮತ್ತು ಕಾರ್ಯತಂತ್ರದ ಬಗ್ಗೆ ಮುತಾಲಿಕ್ ಸ್ಥಳೀಯರೊಂದಿಗೆ ಚರ್ಚೆ ನಡೆಸಿದ್ದು, ದೇವಿ ಭಕ್ತರು ಭಾರತೀಯ ಜ್ಞಾನ ವಿಜ್ಞಾನ ಸಮಿತಿ ವಿರುದ್ಧ ವಾಯ್ಸ್ ಆಫ್ ಹಾಸನ ಎಂಬ ಅಭಿಯಾನಕ್ಕೆ ಮುಂದಾಗಿದ್ದಾರೆ.

ಹಾಸನಾಂಬೆ ಪರಂಪರೆ ಸಂರಕ್ಷಣಾ ವೇದಿಕೆ ಸಮಿತಿ ರಚಿಸಿದ್ದು, ಹಾಸನಾಂಬ ದೇವಿಯ ಆಚಾರಕ್ಕೆ ಧಕ್ಕೆ ತಂದರೆ ಯಾವುದೇ ಹೋರಾಟಕ್ಕೆ ಸಿದ್ಧ ಎಂದಿದ್ದಾರೆ.

ಇದೇ ತಿಂಗಳು 23 ಕ್ಕೆ ಬೃಹತ್ ಮೆರವಣಿಗೆ ನಡೆಸಿ ಡಿಸಿಗೆ ಮನವಿ ಕೊಡಲು ಭಕ್ತರ ನಿರ್ಧರಿಸಿದ್ದು, ಹಿಂದಿನ ಸಂಪ್ರದಾಯ ದಂತೆ ದೇವಿ ಉತ್ಸವ ನಡೆಸುವಂತೆ ಮನವಿಗೆ ನಿರ್ಧಾರಿಸಲಾಗಿದೆ.

Next Story

RELATED STORIES