Top

ಮಳೆಗಾಗಿ ಕಪ್ಪೆ ಮತ್ತು ಕತ್ತೆಗೆ ಮದುವೆ

ಮಳೆಗಾಗಿ ಕಪ್ಪೆ ಮತ್ತು ಕತ್ತೆಗೆ ಮದುವೆ
X

ಬರಗಾಲಕ್ಕೆ ತುತ್ತಾದ ರೈತರು ಮಳೆಗಾಗಿ ಕತ್ತೆ ಮತ್ತು ಕಪ್ಪೆಗೆ ಮದುವೆ ಮಾಡಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದಲ್ಲಿ ನಡೆದಿದೆ.

ಕಪ್ಪೆ ಮತ್ತು ಕತ್ತೆಗೆ ಮದುವೆ ಮಾಡಿಸಿದರೆ ಮಳೆ-ಬೆಳೆ ಚೆನ್ನಾಗಿ ಬರುತ್ತಾದೆ. ಅನ್ನೋದು ಆ ಗ್ರಾಮಸ್ಥರ ನಂಬಿಕೆ. ಹೀಗಾಗಿ ಮಳೆಗಾಗಿ ಆ ಊರ ಜನರು ಮಂತ್ರ, ವಾದ್ಯಮೇಳಗಳೊಂದಿಗೆ ಕಪ್ಪೆ-ಕತ್ತೆ ಮದುವೆ ಮಾಡಿ ಮೆರವಣಿಗೆ ಮೂಲಕ ವರುಣನ ಮೊರೆಹೊಗಿದ್ದಾರೆ.

ಮಣ್ಣಿನ ಮಕ್ಕಳು ಮಳೆರಾಯನನ್ನ ಒಲಿಸಿಕೊಳ್ಳುವ ಪರಿ ತುಂಬ ವಿಚಿತ್ರವಾಗಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದಲ್ಲಿ ವಿಶೀಷ್ಠ ರೀತಿಯಲ್ಲಿ ಕಪ್ಪೆ-ಕತ್ತೆ ಮದುವೆ ನಡೆಯಿತು. ಕಾರಣ ಕಳೆದ ನಾಲ್ಕು ವರ್ಷಗಳಿಂದ ಆವರಿಸಿದ ಭೀಕರ ಬರಗಾಲ. ಈ ವರ್ಷವಾದರೂ ಹಿಂಗಾರು ಮಳೆಯಾಗಲೆಂದು ಕತ್ತೆ-ಕಪ್ಪೆ ಮದುವೆ ಮಾಡಿ ಮೆರವಣಿಗೆ ಮಾಡಿದರು.

ಕಪ್ಪೆ-ಕತ್ತೆ ತಂದು ಅವುಗಳಿಗೆ ರಾಜಾ ವೆಡ್ಸ್ ರಾಣಿ ಅಂತಾ ಹೆಸರಿಟ್ಟು ವದು-ವರರಂತೆ ಅವುಗಳನ್ನು ಅಲಂಕರಿಸಲಾಗಿತ್ತು ಗಂಟೆ-ಜಾಗಟೆ ಬಾರಿಸಿ ಮೆರವಣಿಗೆ ಮಾಡಲಾಯಿತು. ಸ್ಥಳೀಯರು ರಾಜಾ ವೆಡ್ಸ್ ರಾಣಿ ಕತ್ತೆಗೆ ಅಕ್ಷತೆಹಾಕಿ, ಆರತಿ ಬೆಳಗಿ ಭೂಮಿಗೆ ಬೇಗನೆ ಮಳೆಸುರಿದು ಹಸಿದ ಹೊಟ್ಟೆಗೆ ಅನ್ನ ನೀಡಪ್ಪಾ. ಭೂತಾಯಿಯ ಮಕ್ಕಳಾದ ನಾವೆಲ್ಲ ನಿನ್ನ ಕರುಣೆಯಿಂದ ಜೀವನ ನಡೆಸುತ್ತೆವೆ ಎಂದು ಆ ವರುಣನಲ್ಲಿ ಬೇಡಿಕೊಂಡರು.

Next Story

RELATED STORIES