Top

ಜೆಡಿಎಸ್ ಟಿಕೆಟ್ ಆಕಾಂಕ್ಷಿ ಲಕ್ಷ್ಮೀಗೆ ಭಾರೀ ಮುಖಭಂಗ..!

ಜೆಡಿಎಸ್ ಟಿಕೆಟ್ ಆಕಾಂಕ್ಷಿ ಲಕ್ಷ್ಮೀಗೆ ಭಾರೀ ಮುಖಭಂಗ..!
X

ಮಂಡ್ಯ: ಮಂಡ್ಯ ಲೋಕಸಭೆ ಉಪಚುನಾವಣೆ ಹಿನ್ನೆಲೆ, ಜೆಡಿಎಸ್ ಅಭ್ಯರ್ಥಿಯಾಗಿ ಲಕ್ಷ್ಮೀ ಅಶ್ವಿನ್ ಗೌಡಗೆ ಟಿಕೆಟ್ ನೀಡುತ್ತೇವೆಂದು ಭರವಸೆ ನೀಡಲಾಗಿತ್ತು. ಆದ್ರೀಗ ಲಕ್ಷ್ಮೀಗೆ ಟಿಕೆಟ್ ಕೈತಪ್ಪಿದ್ದು, ತೀವ್ರ ಮುಖಭಂಗವಾಗಿದೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಪರವಾಗಿ ಲಕ್ಷ್ಮೀಗೆ ಟಿಕೆಟ್ ನೀಡುವ ಭರವಸೆ ನೀಡಿದ್ದು, ಈ ಕಾರಣಕ್ಕಾಗಿ ಐ.ಆರ್.ಎಸ್ ಅಧಿಕಾರಿಯಾಗಿದ್ದ ಲಕ್ಷ್ಮೀ ರೈಲ್ವೆ ಇಲಾಖೆಗೆ ರಾಜೀನಾಮೆ ನೀಡಿದ್ದರು.

ಅಲ್ಲದೇ ಮಂಡ್ಯದಲ್ಲಿ ನಟಿ ರಮ್ಯಾ ವಿರುದ್ಧ ಸೂಕ್ತ ಅಭ್ಯರ್ಥಿ ಎಂದು ಲಕ್ಷ್ಮಿರನ್ನು ಕರೆತರಲಾಗಿತ್ತು. ಆದರೆ ಬದಲಾದ ರಾಜಕೀಯ ಬೆಳವಣಿಗೆ ಹಿನ್ನೆಲೆ ರಮ್ಯಾ ಮಂಡ್ಯದಿಂದ ಸ್ಪರ್ಧಿಸದ ಕಾರಣ, ಟಿಕೆಟ್ ನಂಬಿ ಕುಳಿತಿದ್ದ ಲಕ್ಷ್ಮೀಗೆ ನಿರಾಸೆಯಾಗಿದೆ.

ಬಹಿರಂಗ ವೇದಿಕೆಯಲ್ಲೂ ಲಕ್ಷ್ಮೀ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದರು ಆದ್ರೆ ಇದೀಗ, ಸ್ಥಳೀಯ ಜೆಡಿಎಸ್ ಮುಖಂಡರ ಮಾತು ಕೇಳಿದ ಜೆಡಿಎಸ್, ಶಿವರಾಮೇಗೌಡರಿಗೆ ಟಿಕೆಟ್ ನೀಡಲು ಮುಂದಾಗಿದೆ.

ಇದೀಗ ಟಿಕೆಟ್‌ಗಾಗಿ ಕಾದು ಕುಳಿತು, ತಮ್ಮ ವೃತ್ತಿಗೂ ರಾಜೀನಾಮೆ ನೀಡಿದ್ದ ಲಕ್ಷ್ಮೀ ಅಶ್ವಿನ್ ಗೌಡ ಮುಂದಿನ ನಡೆಯೇನು ಅನ್ನೋದನ್ನ ಕಾದು ನೋಡಬೇಕಿದೆ.

Next Story

RELATED STORIES