ಮೊಬೈಲ್ ಗೇಮ್ಸ್ ಆಡುತ್ತಿದ್ದಾಗ ಬಾವಿ ಬಿದ್ದು ಯುವಕ ಸಾವು

X
TV5 Kannada14 Oct 2018 9:58 AM GMT
ಬಾವಿಕಟ್ಟೆಯಲ್ಲಿ ಕೂತು ಮೊಬೈಲ್ ಫೋನ್ ನಲ್ಲಿ ಗೇಮ್ಸ್ ಆಡುವುದರಲ್ಲಿ ತಲ್ಲೀನನಾಗಿದ್ದ ಯುವಕನೊಬ್ಬ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಉಡುಪಿಯಲ್ಲಿ ಸಂಭವಿಸಿದೆ.
ಬಸ್ರೂರು ಗುಂಡಿಗೋಳಿ ಬೈಲ್ ಮನೆ ಶೀನ ಪೂಜಾರಿ ಅವರ ಪುತ್ರ ಭಾಸ್ಕರ ಪೂಜಾರಿ (21) ಮೃತಪಟ್ಟ ದುರ್ದೈವಿ.
ಭಾಸ್ಕರ ಅವರಿಗೆ ಮೊಬೈಲ್ ನಲ್ಲಿ ಗೇಮ್ ಆಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದ ಭಾಸ್ಕರ ಪೂಜಾರಿ ಬಾವಿಕಟ್ಟೆಯ ಮೇಲೆ ಕುಳಿತು ಆಟದಲ್ಲಿ ನಿರತನಾಗಿದ್ದಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾನೆ.
ಭಾಸ್ಕರ ಪೂಜಾರಿಯ ಸಹೋದರ ರಾಘವೇಂದ್ರ ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story