ಶಾಸಕರ ಕಾರು, ಪಾಸ್ ಬಳಸುತ್ತಿರುವ ಜನಾರ್ದನ ರೆಡ್ಡಿ!

X
TV5 Kannada14 Oct 2018 12:42 PM GMT
ಶಾಸಕರ ನಾಮಫಲಕವುಳ್ಳ ಕಾರು ಹಾಗೂ ಪಾಸ್ ದುರ್ಬಳಕೆ ಮಾಡಿಕೊಂಡು ಮಾಜಿ ಸಚಿವ ಜನಾರ್ದನ ರೆಡ್ಡಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದ್ದು, ವೀಡಿಯೋದಲ್ಲಿ ಸೆರೆಯಾಗಿದೆ.
ಬೆಳಗಾವಿಯಿಂದ ಮುಧೋಳಕ್ಕೆ ಬಂದ ಜನಾರ್ದನ ರೆಡ್ಡಿ ಕಾರಿನ ಮೇಲೆ ಸರಕಾರ ನೀಡುವ ಶಾಸಕ ಎಂಬ ನಾಮಫಲಕ ಕಂಡುಬಂದಿದೆ. ಜನಪ್ರತಿನಿಧಿ ಅಲ್ಲದಿದ್ದರೂ ಶಾಸಕರ ಪಾಸ್ ಕೂಡ ಬಳಸಿಕೊಂಡು ರಾಜಾರೋಷವಾಗಿ ಸಂಚರಿಸುತ್ತಿದ್ದಾರೆ.
ಮಾಜಿ ಶಾಸಕಾಗಿದ್ದರೂ ಹಾಲಿ ಶಾಸಕ ಶ್ರೀರಾಮುಲು ಅವರ ಕಾರು ಹಾಗೂ ಅವರ ಪಾಸ್ ದುರ್ಬಳಕೆ ಮಾಡಿಕೊಂಡು ಸಂಚರಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. KA-05-252 ಸಂಖ್ಯೆಯುಳ್ಳ ಕಾರಿನಲ್ಲಿ ಶಾಸಕರ ನಾಮಫಲಕ ಇರುವುದು ಕಂಡು ಬಂದಿದೆ. ಈ ನಾಮಫಲಕ ಶಾಸಕ ರಾಮುಲು ಬಳಿಯಿದ್ದ ನಾಮಫಲಕ ಇದಾಗಿದೆ ಅದರೆ ಅ ನಾಮಫಲಕ ಬಳಸುತ್ತೀರುವವರು ಮಾತ್ರ ಜನಾರ್ದನ ರೆಡ್ಡಿ!
Next Story