Top

'ಡಿಕೆಶಿದು ಬಳ್ಳಾರಿಯಲ್ಲಿ ಏನೂ ನಡೆಯೊಲ್ಲ'

ಡಿಕೆಶಿದು ಬಳ್ಳಾರಿಯಲ್ಲಿ ಏನೂ ನಡೆಯೊಲ್ಲ
X

ಬಾಗಲಕೋಟೆ : ಮುಧೋಳದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಸುದ್ದಿಗೋಷ್ಠಿ ನಡೆಸಿದ್ದು, ಸಣ್ಣ ಪುಟ್ಟ ಇರುವೆಗಳು ಮಾತನಾಡಿದ್ರೆ ಅದಕ್ಕೆ ಸಮಾಧಾನ ಹೇಳುವ ಪರಿಸ್ಥಿತಿ ನನ್ನದಲ್ಲ ಎಂದು ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ್ದಾರೆ.

ಡಿಕೆಶಿದು ಬಳ್ಳಾರಿಯಲ್ಲಿ ಏನೂ ನಡೆಯೋದಿಲ್ಲ. ಡಿಕೆಶಿ ಬಗ್ಗೆ ಯಾಕಿಷ್ಟು ದೊಡ್ಡದಾಗಿ ಯೋಚನೆ ಮಾಡ್ತೀರಿ..? ಅವರದು ಕನಕಪುರ, ರಾಮನಗರದಲ್ಲಿ ನಡೆಯಬಹುದಷ್ಟೆ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಡಿಕೆಶಿಯದು ಏನು ನಡೆಯೋಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಹೈದ್ರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಜನ್ರು ನಮ್ಮನ್ನು ಭಾವಾನಾತ್ಮಕ,ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಶ್ರೀರಾಮುಲು ಬಳ್ಳಾರಿ ಮಣ್ಣಿನ ಮಗ. ಸಿದ್ದರಾಮಯ್ಯ, ಡಿಕೆಶಿ, ಎಂದು ಹೇಳಿಕೊಂಡು ಓಡಾಡಿದ್ರೆ, ಜನ ಆವೇಶದಲ್ಲಿ ಇನ್ನು ಹೆಚ್ಚಿನ ಮಾತುಗಳಿಂದ ಶಾಂತಮ್ಮರನ್ನು ಗೆಲ್ಲಿಸ್ತಾರೆ.

ಬಳ್ಳಾರಿ ಜಿಲ್ಲೆಯ ಜನರಿಗೆ ರಾಮುಲು ಸ್ವಾಭಿಮಾನದ ಬಗ್ಗೆ ಗೊತ್ತು. ಯಾರೋ ಎಲ್ಲಿಂದಲೋ ಬಂದು ಚಾಲೆಂಜ್ ಮಾಡಿದ್ರೆ ನಾವು ತಲೆಕೆಡಿಸಿಕೊಳ್ಳುವ ಪ್ರಶ್ನೆಯಿಲ್ಲ. ಬಳ್ಳಾರಿಯಲ್ಲಿ ಶಾಂತಮ್ಮರೇ ಗೆಲ್ತಾರೆ. ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್ ಸೈಡ್‌ಲೈನ್ ಆಗುವ ಪ್ರಶ್ನೆಯಿಲ್ಲ ಎಂದಿದ್ದಾರೆ.

ಅಲ್ಲದೇ ಇಡೀ ರಾಜ್ಯದ ಜನತೆ ರಾಜ್ಯದಲ್ಲಿ ಬಿಜೆಪಿ ಬರಬೇಕೆಂದು ಅಪೇಕ್ಷಿಸುತ್ತಾರೆ. ಬಿಜೆಪಿ ಸರ್ಕಾರ ಮತ್ತೆ ರಾಜ್ಯದಲ್ಲಿ ಬರೋದು ಕಾಲವೇ ನಿರ್ಧಾರ ಮಾಡುತ್ತೆ ಎಂದು ಹೇಳಿದ್ದಾರೆ.

Next Story

RELATED STORIES