Top

ಸರ್ಕಾರಿ ಆಸ್ಪತ್ರೆಗೆ ಹೋಗುವ ರೋಗಿಗಳೇ ಹುಷಾರ್...!

ಸರ್ಕಾರಿ ಆಸ್ಪತ್ರೆಗೆ ಹೋಗುವ ರೋಗಿಗಳೇ ಹುಷಾರ್...!
X

ಚಿತ್ರದುರ್ಗ: ರಾತ್ರಿ ವೇಳೆ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಹೋಗುವ ರೋಗಿಗಳು ಸ್ವಲ್ಪ ಹುಷಾರಾಗಿರಿ. ಯಾಕಂದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಬದಲು ಬೇರೆಯವರು ಚಿಕಿತ್ಸೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ವೈದ್ಯರ ಬದಲು ನಕಲಿ ವೈದ್ಯನೊಬ್ಬ ಡ್ಯೂಟಿ ಮಾಡುತ್ತಿರುವ ವಿಷಯ ಬಹಿರಂಗವಾಗಿದೆ.

ಸರ್ಕಾರಿ ವೈದ್ಯರು ರಾತ್ರಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಚಿಕಿತ್ಸೆ ಪಡೆಯಲು ಬಂದ ರೋಗಿಗಳಿಗೆ ನಕಲಿ ಡಾಕ್ಟರ್ ದಿನೇಶ್ ಮನಸ್ಸಿಗೆ ಬಂದಹಾಗೆ ಚಿಕಿತ್ಸೆ ಕೊಡುತ್ತಾನೆ.

ಅಪಘಾತ, ಹಾವುಕಡಿತ, ಹೃದಯಸಂಬಂಧಿ ಕಾಯಿಲೆಯಂಥ ತುರ್ತು ಸಮಸ್ಯೆಗೆ ನಕಲಿ ವೈದ್ಯ ದಿನೇಶ್ ಚಿಕಿತ್ಸೆ ನೀಡ್ತಾನಂತೆ. ಈತನಿಗೆ ಜಿಲ್ಲಾಸ್ಪತ್ರೆ ವೈದ್ಯರು, ಜಿಲ್ಲಾ ಸರ್ಜನ್, ಆರ್ ಎಂ ಓ ಸಾಥ್ ನೀಡುತ್ತಿದ್ದಾರೆ.

ಕೇವಲ ಹೆಲ್ತ್‌ಇನ್ಸ್‌ಪೆಕ್ಟರ್ ತರಬೇತಿ ಪಡೆದಿರುವ ದಿನೇಶ್, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ವೈದ್ಯನಾಗಿದ್ದಾನೆ. ಇನ್ನು ಈತನ ಈ ಚೆಲ್ಲಾಟಕ್ಕೆ ಬ್ರೇಕ್ ಹಾಕೋರ್ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.

Next Story

RELATED STORIES