Top

ಟ್ರಕ್​ಗೆ ಕಾರು ಡಿಕ್ಕಿ: ಒಂದೇ ಕುಟುಂಬದ 9 ಮಂದಿ ದಾರುಣ ಸಾವು

ಟ್ರಕ್​ಗೆ ಕಾರು ಡಿಕ್ಕಿ: ಒಂದೇ ಕುಟುಂಬದ 9 ಮಂದಿ ದಾರುಣ ಸಾವು
X

ದೇವಸ್ಥಾನಕ್ಕೆ ಭೇಟಿ ಕೊಟ್ಟು ಹಿಂತಿರುಗುತ್ತಿದ್ದ ಕಾರು ಟ್ರಕ್​ಗೆ ಡಿಕ್ಕಿ ಹೊಡದ ಪರಿಣಾಮ ಒಂದೇ ಕುಟುಂಬದ 9 ಮಂದಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಚತ್ತೀಸ್​ಗಢದಲ್ಲಿ ಸಂಭವಿಸಿದೆ.

ಡೊಂಗಗರ್ಢ್ ನ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಮನೆಗೆ ಎಸ್​ಯುವಿ ಕಾರಿನಲ್ಲಿ ಕುಟುಂಬ ಮರಳುತ್ತಿತ್ತು. ಬೊಲೆರೊ ಎಸ್​ಯುವಿ ಕಾರು ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ರಾಯ್​ಪುರ್​ನಿಂದ 70 ಕಿ.ಮೀ. ದೂರದಲ್ಲಿರುವ ರಾಜನಂದ್​ಗಂಜ್​ ಬಳಿ ಭಾನುವಾರ ಮುಂಜಾನೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Next Story

RELATED STORIES